AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ

IPL 2026 SRH vs RCB Match 67: ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿತು. ಅಗ್ರ 2 ಸ್ಥಾನಗಳಿಕೆಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿತ್ತು. 256 ರನ್ ಗಳಿಸಿ SRH ಗೆದ್ದರೂ, ಅಗ್ರಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ. ಇತ್ತ ಬೃಹತ್ ಗುರಿ ಬೆನ್ನಟ್ಟುವಲ್ಲಿ ವಿಫಲವಾದ RCB ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ
Rcb Vs Srh
ಪೃಥ್ವಿಶಂಕರ
|

Updated on:May 22, 2026 | 11:59 PM

Share

ಐಪಿಎಲ್ 2026 (IPL2026) ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (SRH vs RCB) ತಂಡಗಳು ಮುಖಾಮುಖಿಯಾಗಿದ್ದವು. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿತ್ತು. ಅದರಲ್ಲೂ ಸನ್‌ರೈಸರ್ಸ್ ಅಗ್ರಸ್ಥಾನಕ್ಕೇರಬೇಕೆಂದರೆ ಆರ್​ಸಿಬಿ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತಾದರೂ ಅಗ್ರ 2ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ 256 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್​ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಬೇಕಾಯಿತು.

ರನ್​ಗಳ ಶಿಖರ ಕಟ್ಟಿದ ಸನ್​ರೈಸರ್ಸ್​

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ನಾಲ್ಕು ಓವರ್‌ಗಳಲ್ಲಿ 45 ರನ್ ಸೇರಿಸಿದರು. ಆದರೆ ರಸಿಕ್ ಸಲಾಂ ದಾರ್ ಬೌಲಿಂಗ್​ನಲ್ಲಿ ಹೆಡ್ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಂತರ ಅಭಿಷೇಕ್ ಶರ್ಮಾ, ಇಶಾನ್ ಕಿಶಾನ್ ಅವರೊಂದಿಗೆ ಸ್ಫೋಟಕ ಜೊತೆಯಾಟ ಕಟ್ಟಿದರು. ಮೂರು ಜೀವದಾನಗಳ ಲಾಭ ಪಡೆದ ಅಭಿಷೇಕ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ, 22 ಎಸೆತಗಳಲ್ಲಿ 56 ರನ್ ಬಾರಿಸಿ ಔಟಾದರು.

ಆ ನಂತರ ಜೊತೆಯಾದ ಇಶಾನ್ ಕಿಶಾನ್ ಹಾಗೂ ಹೆನ್ರಿಕ್ ಕ್ಲಾಸೆನ್ ಕೂಡ ತಲಾ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. ಕ್ಲಾಸೆನ್ 24 ಎಸೆತಗಳಲ್ಲಿ 51 ರನ್ ಗಳಿಸಿದರೆ, ಇಶಾನ್ ಕಿಶಾನ್ 79 ರನ್ ಗಳಿಸಿದರು. ನಿತೀಶ್ ರೆಡ್ಡಿ ಕೂಡ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 12 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು.

SRH vs RCB IPL 2026 Highlights: ಸನ್​ರೈಸರ್ಸ್​ ವಿರುದ್ಧ 55 ರನ್​ಗಳಿಂದ ಸೋತ ಆರ್​ಸಿಬಿ

ಆರ್​ಸಿಬಿ 55 ರನ್​ಗಳ ಸೋಲು

ಈ ಗುರಿ ಬೆನ್ನಟ್ಟಿದ ಆರ್​ಸಿಬಿಗೂ ಸ್ಫೋಟಕ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್ ಬಾರಿಸಿ ಉತ್ತಮ ಆರಂಭ ನೀಡಿದರು. ಆದರೆ ಎಹ್ಸಾನ್ ಮಾಲಿಂಗ, ವೆಂಕಟೇಶ್ ಅವರನ್ನು ಔಟ್ ಮಾಡುವ ಮೂಲಕ ರನ ವೇಗಕ್ಕೆ ಕಡಿವಾಣ ಹಾಕಿದರು. ನಂತರ ಶಕೀಬ್ ಹುಸೇನ್ ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿ, ವಿರಾಟ್ ಕೊಹ್ಲಿಯನ್ನು 15 ರನ್‌ಗೆ ಔಟ್ ಮಾಡಿದರು. ದೇವದತ್ ಪಡಿಕ್ಕಲ್ ಕೂಡ 14 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿ ಔಟಾದರು. ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ 56 ರನ್ ಗಳಿಸಿದರಾದರೂ ಅವರ ಇನ್ನಿಂಗ್ಸ್ ತುಂಬಾ ನಿಧಾನವಾಗಿತ್ತು. ಕೃನಾಲ್ ಪಾಂಡ್ಯ ಅಜೇಯ 41 ಮತ್ತು ಟಿಮ್ ಡೇವಿಡ್ ಅಜೇಯ 15 ರನ್ ಗಳಿಸಿದರು. ಕೊನೆಯಲ್ಲಿ, ಆರ್‌ಸಿಬಿ ಕೇವಲ 200 ರನ್ ಗಳಿಸಿ ಪಂದ್ಯವನ್ನು 55 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 pm, Fri, 22 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?