ಓದು ಮುಂದುವರಿಸಲು ಬಿಡದ ಕಾರಣ 17 ರ ತರುಣಿ ಕುಟುಂಬದ ನಾಲ್ವರು ಸದಸ್ಯರನ್ನು ವಿಷವುಣಿಸಿ ಕೊಂದಳೇ?
ಅಂದು ಎಲ್ಲರೊಂದಿಗೆ ಊಟ ಮಾಡದ ರಕ್ಷಿತಾ ಮೇಲೆ ಅನುಮಾನ ಹುತ್ತ ಮನೆ ಮಾಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಭರಮ ಸಾಗರ ಪೊಲೀಸರ ಪ್ರಕಾರ, ರಕ್ಷಿತಾಳೇ ತನ್ನ ಕುಟುಂಬದ ಸದಸ್ಯರಿಗೆ ಊಟದಲ್ಲಿ ವಿಷಬೆರೆಸಿ ಕೊಂದಿದ್ದಾಳೆ.
ಜುಲೈ 12 ರಂದು ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ವಿಷಪ್ರಾಶನದಿಂದ ಮೃತರಾಗಿದ್ದು ರಾಜ್ಯದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಈ ಘಟನೆಯಲ್ಲಿ ತಿಪ್ಪಾ ನಾಯ್ಕ್, ಸುಧಾಬಾಯಿ, ರಮ್ಯಾ ಮತ್ತು ಗುಂಡಿಬಾಯಿ ಎನ್ನುವವರು ಮರಣವನ್ನಪ್ಪಿದ್ದರು. ರಾಹುಲ್ ಹೆಸರಿನ 18 ರ ತರುಣ ಹೊಟ್ಟೆಗೆ ವಿಷ ಸೇರಿದ್ದರೂ ಚಿಕಿತ್ಸೆ ಸಿಕ್ಕದ್ದರಿಂದ ಬದುಕುಳಿದಿದ್ದಾನೆ. ಇದೇ ಕುಟುಂಬದ 17ರ ಬಾಲೆ ರಕ್ಷಿತಾ ಜುಲೈ 12 ರಂದು ಅಪ್ಪ, ಅಮ್ಮ, ಅಜ್ಜಿ, ತಂಗಿ ಮತ್ತು ಅಣ್ಣನೊಂದಿಗೆ ಊಟ ಮಾಡದ ಕಾರಣ ಅವಳಿಗೆ ಏನೂ ಆಗಿರಲಿಲ್ಲ.
ಈ ಘಟನೆ ನಡೆದು ಮೂರು ತಿಂಗಳ ನಂತರ ಅದಕ್ಕೆ ಒಂದು ನಂಬಲು ಸಾಧ್ಯವಾಗದಂಥ ತಿರುವ ಸಿಕ್ಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಈಗ ಲಭ್ಯವಾಗಿದ್ದು, ಆ ನಾಲ್ವರು ವಿಷಪ್ರಾಶನದಿಂದ ಮೃತಪಟ್ಟಿರುವುದು ಖಚಿತಪಟ್ಟಿದೆ. ಆದರೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ವಿಷಪ್ರಾಶನ ಮಾಡಿಸಿ ಕೊಲ್ಲಲಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.
ಅಂದು ಎಲ್ಲರೊಂದಿಗೆ ಊಟ ಮಾಡದ ರಕ್ಷಿತಾ ಮೇಲೆ ಅನುಮಾನ ಹುತ್ತ ಮನೆ ಮಾಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಭರಮ ಸಾಗರ ಪೊಲೀಸರ ಪ್ರಕಾರ, ರಕ್ಷಿತಾಳೇ ತನ್ನ ಕುಟುಂಬದ ಸದಸ್ಯರಿಗೆ ಊಟದಲ್ಲಿ ವಿಷಬೆರೆಸಿ ಕೊಂದಿದ್ದಾಳೆ.
ಓದು ಬರಹದಲ್ಲಿ ಅಪಾರ ಆಸಕ್ತಿಯಿದ್ದ ರಕ್ಷಿತಾಗೆ ಆವಳ ಪಾಲಕರರು ಶಾಲೆಗೆ ಕಳಿಸದೆ, ಕೂಲಿ ಮಾಡಲು ಕಳಿಸಿ ಮನೆಗೆಲಸ ನೋಡಿಕೊಳ್ಳುವಂತೆ ಮಾಡಿದ್ದರಿಂದ ಬೇಸ್ತ್ತತ್ತು ಅವರಿಗೆ ವಿಷವಿಕ್ಕಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಅವಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.