PM Modi in Karnataka: ಪ್ರಧಾನಿ ನರೇಂದ್ರ ಮೋದಿ ಮೇಖ್ರಿ ಸರ್ಕಲ್ ಬಳಿ ಆಗಮಿಸುವ ಮೊದಲು ಕಾರು-ಬೈಕ್ ನಡುವೆ ಅಪಘಾತ, ಮಗುವಿಗೆ ಗಾಯ
ಗಾಯ ತೀವ್ರ ಸ್ವರೂಪದಲ್ಲವಾದರೂ ಮಗು ಮತ್ತು ತಾಯಿ ಭಯಗೊಂಡಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
Bengaluru: ಇದು ಈ ಸಂದರ್ಭದಲ್ಲಿ ಅಗಬಾರದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸರಿಗೆ ಉಸಿರಾಡಲು ಸಹ ಪುರುಸೊತ್ತಿಲ್ಲದ ಸ್ಥಿತಿ. ಅವರ ದುರಾದೃಷ್ಟಕ್ಕೆ ಪ್ರಧಾನಿಯವರ ಕಾನ್ವಾಯ್ ಮೇಖ್ರಿ ಸರ್ಕಲ್ ಗೆ (Mekhri Circle) ಆಗಮಿಸುವ ಮೊದಲು ಒಂದು ಕಾರು ಮತ್ತು ಬೈಕ್ ನಡುವೆ ಚಿಕ್ಕ ಅಪಘಾತ (accident) ನಡೆದು ಅವರನ್ನು ಆತಂಕಕ್ಕೀಡು ಮಾಡಿದೆ. ಬೇಸರದ ವಿಷಯವೆಂದರೆ, ಈ ಅಪಘಾತಲ್ಲಿ 2 ವರ್ಷದ ಮಗು ಗಾಯಗೊಂಡಿದೆ. ಗಾಯ ತೀವ್ರ ಸ್ವರೂಪದಲ್ಲವಾದರೂ ಮಗು ಮತ್ತು ತಾಯಿ ಭಯಗೊಂಡಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 20, 2022 01:58 PM
Latest Videos