ಯುದ್ಧ ಭೂಮಿಯಿಂದ ಸಾಕು ನಾಯಿಯೊಂದಿಗೆ ಬಂದ ಬೆಂಗಳೂರು ಮೂಲದ ವಿದ್ಯಾರ್ಥಿ
ಉಕ್ರೇನ್ನ ಖಾರ್ಕೀವ್ ನಿಂದ ವಿದ್ಯಾರ್ಥಿ ಒಬ್ಬರು ಸಾಕು ನಾಯಿ ಜೊತೆ ಬಂದಿದ್ದಾರೆ. ಬೆಂಗಳೂರು ಮೂಲದ ರಂಜಿತ್ ರೆಡ್ಡಿ ನಾಯಿ ಜೊತೆ ಬಂದ ವಿದ್ಯಾರ್ಥಿ ಆಗಿದ್ದಾರೆ.
ಉಕ್ರೇನ್ (Ukraine) ನ ಖಾರ್ಕೀವ್ ನಿಂದ ವಿದ್ಯಾರ್ಥಿ ಒಬ್ಬರು ಸಾಕು ನಾಯಿ ಜೊತೆ ಬಂದಿದ್ದಾರೆ. ಬೆಂಗಳೂರು ಮೂಲದ ರಂಜಿತ್ ರೆಡ್ಡಿ ನಾಯಿ ಜೊತೆ ಬಂದ ವಿದ್ಯಾರ್ಥಿ ಆಗಿದ್ದಾರೆ. ನಾಯಿ ಕರೆದುಕೊಂಡು ಬರುವುದು ಕಷ್ಟದ ಕೆಲಸವಾಗಿತ್ತು. ಸಾಮಾನ್ಯ ವಿಮಾನದಲ್ಲಿ ಕರೆದುಕೊಂಡು ಬರುವುದು ಕಷ್ಟವಾಗಿತ್ತು. ಸಚಿವರಿಂದ ವಿಶೇಷ ಅನುಮತಿ ಪಡೆದು ಕರೆದುಕೊಂಡು ಬಂದಿದ್ದೇನೆ. ಹೋದ್ರೆ ನಾಯಿ ಜೊತೆನೆ ಹೋಗಬೇಕು ಅಂದುಕೊಂಡಿದ್ದೆ. ನಾಯಿಗೆ ಬೆಂಗಳೂರು ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತೆ. ಮನೆಯೊಳಗೆ ಎಸಿಯಲ್ಲಿಯೇ ನಾಯಿ ಸಾಕಬೇಕು. ಬೆಂಗಳೂರಿನಲ್ಲಿ ಸಾಕುವುದು ಕಷ್ಟವಾಗುತ್ತೆ. ಕಷ್ಟವಾದ್ರೆ ಬೇರೆ ದೇಶಕ್ಕೆ ಹೋಗಬೇಕಾಗುತ್ತೆ ಎಂದು ರಂಜಿತ್ ರೆಡ್ಡಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
ಉಕ್ರೇನ್ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ಭವಿಷ್ಯವೇನು? ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ್