ಅರಬ್ಬಿ ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿಯಾಗಿ ದೋಣಿ ಮುಳುಗಡೆ! ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ನೋಡಿ

ಮಾವಿನಕುರ್ವೆ 80 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಸಿಹಾನ್ ಪಿಶರೀಶ್ ಹೆಸರಿನ ಬೋಟ್ ಮುಳುಗಡೆಯಾಗಿದೆ.

TV9kannada Web Team

| Edited By: sandhya thejappa

Apr 05, 2022 | 12:35 PM

ಕಾರವಾರ: ಅರಬ್ಬಿ ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿಯಾಗಿ ದೋಣಿ (Boat) ಮುಳುಗಡೆಯಾಗಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರು ದೀಪಸ್ತಂಭದ ಬಳಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೋಣಿಯಲ್ಲಿದ್ದ 7 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಮಾವಿನಕುರ್ವೆ 80 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಸಿಹಾನ್ ಪಿಶರೀಶ್ ಹೆಸರಿನ ಬೋಟ್ ಮುಳುಗಡೆಯಾಗಿದೆ. ಜೈ ಶ್ರೀರಾಮ ಬೋಟ್​ನಲ್ಲಿದ್ದವರು ಪಿಶರೀಶ್ ಬೋಟ್​ನ 7 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

Home Loan: ಈ 6 ಅಂಶಗಳ ಸಹಾಯದಿಂದ ಹೋಮ್​ ಲೋನ್ ಪಡೆಯುವ ಅರ್ಹತೆ ಹೆಚ್ಚಬಹುದು ಗಮನಿಸಿ

Good News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ: ಸಿಎಂ ಬೊಮ್ಮಾಯಿ

Follow us on

Click on your DTH Provider to Add TV9 Kannada