ಕೊಪ್ಪಳದ ಯರಡೋಣ ಗ್ರಾಮದಲ್ಲಿ ಪ್ರತಿದಿನ ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿರುವ ಗೂಳಿ, ಜನರಲ್ಲಿ ಅಚ್ಚರಿ

|

Updated on: Aug 22, 2024 | 10:46 AM

ಸಹಜವಾಗೇ ಗೂಳಿಯ ಬಗ್ಗೆ ಊರ ಜನರಲ್ಲಿ ಭಕ್ತಿಭಾವ ಹೆಚ್ಚಿದೆ. ಎಲ್ಲರೂ ಸೇರಿ ಗೂಳಿಯ ಹೆಚ್ಚಿನ ಆರೈಕೆ ಮಾಡುತ್ತಿದ್ದಾರೆ. ದೃಶ್ಯಗಳಲ್ಲಿ ಕಾಣುವ ಹಾಗೆ ಜನರು ಗೂಳಿಯ ಸುತ್ತ ನೆರೆದಿರುವುದನ್ನು ನೋಡಬಹುದು. ಸುತ್ತಮುತ್ತಲಿನ ಗ್ರಾಮಗಳಿಗೂ ಸುದ್ದಿ ಹರಡಿತ್ತು ಅಲ್ಲಿನ ಜನ ಗೂಳಿಯನ್ನು ನೋಡಲು ಬರುತ್ತಿದ್ದಾರೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಕೊಪ್ಪಳ: ಇದು ಕೇವಲ ಯರಡೋಣಾ ಗ್ರಾಮದ ಜನರ ಅಚ್ಚರಿ ಮಾತ್ರವಲ್ಲ, ವಿಡಿಯೋ ನೋಡುವ ನೀವು ಸಹ ವಿಸ್ಮಯಕ್ಕೊಳಗಾಗುತ್ತೀರಿ. ಯರಡೋಣಾ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿರುವ ಒಂದು ಪುಟ್ಟ ಊರು. ಗ್ರಾಮದಲ್ಲಿರುವ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಗೂಳಿಯೊಂದು ಕಳೆದ ನಾಲ್ಕು ದಿನಗಳಿಂದ ಪ್ರತಿರಾತ್ರಿ ಗುಡಿಯ ಪ್ರದಕ್ಷಿಣೆ ಹಾಕುತ್ತಿದೆ. ಈ ಗೂಳಿ ಗ್ರಾಮದ ನಿವಾಸಿಗಳು ಸಾಕಿದ್ದಲ್ಲ. ಊರವರು ಹೇಳುವ ಪ್ರಕಾರ ಗ್ರಾಮದ ಆರಾಧ್ಯ ದೈವ ಶ್ರೀ ಮುರಡಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿರುವ ಗೂಳಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಗೂಳಿಗಳನ್ನು ದೇವರಿಗೆ ಬಿಡುವ ಪದ್ಧತಿ ಈಗಲೂ ಜಾರಿಯಲ್ಲಿದೆ. ಇನ್ ಫ್ಯಾಕ್ಟ್ ಪ್ರತಿ ಗ್ರಾಮದಲ್ಲಿ ದೇವರಿಗೆ ಬಿಟ್ಟ ಗೂಳಿಗನ್ನು ನೋಡಬಹುದು. ಹಾಗೆ ದೇವರಿಗೆ ಬಿಟ್ಟ ಗೂಳಿಗಳ ದೇಖರೇಖಿಯನ್ನು ಆಯಾ ಊರವರು ನೋಡಿಕೊಳ್ಳುತ್ತಾರೆ. ಸರಿ, ಯರಡೋಣಾ ಗ್ರಾಮದ ಗೂಳಿ ನಿನ್ನೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಬರೋಬ್ಬರಿ 35 ಸುತ್ತುಗಳನ್ನು ಹಾಕಿದೆಯಂತೆ. ಊರಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದರೆ ಗೂಳಿ ಮಾತ್ರ ತನ್ನ ಪಾಡಿಗೆ ತಾನು ಗುಡಿಯ ಪ್ರದಕ್ಷಿಣೆ ಹಾಕುವಲ್ಲಿ ಮಗ್ನವಾಗಿತ್ತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಪ್ಪಳ: ಇನ್ನೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ