AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಚಿನ್ನಾಭರಣ ಅಂಗಡಿಯೊಂದನ್ನು ದೋಚಲು ಅದರ ನೌಕರ ಹಳೆಯ ವಿಧಾನವನ್ನೇ ಬಳಸಿದ್ದ!

ಬೆಂಗಳೂರು: ಚಿನ್ನಾಭರಣ ಅಂಗಡಿಯೊಂದನ್ನು ದೋಚಲು ಅದರ ನೌಕರ ಹಳೆಯ ವಿಧಾನವನ್ನೇ ಬಳಸಿದ್ದ!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 17, 2023 | 11:35 AM

Share

ರಾಜಸ್ತಾನದಿಂದ ರಾಕೇಶ್ ಹೆಸರಿನ ಸ್ನೇಹಿತನನ್ನು ಕರೆಸಿ ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿಯಿಂದ 4 ಕೇಜಿ ಚಿನ್ನಾಭರಣ, ರೂ. 9 ಲಕ್ಷ ನಗದು ಮತ್ತು ಬೆಳ್ಳಿ ಸಾಮಾನುಗಳನ್ನು ಲಪಟಾಯಿಸಿದ್ದಾನೆ. ಅರವಿಂದ್ ವಾಪಸ್ಸು ಬಂದು ಹಲಸೂರು ಪೊಲೀಸ್ ಠಾನಣೆಯಲ್ಲಿ ದೂರು ದಾಖಲಿಸಿಸದ ಬಳಿಕ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬೆಂಗಳೂರು: ಇದು ಕಳ್ಳತನದ ಪುರಾತನ ವಿಧಾನ ಮಾರಾಯ್ರೇ. ಕಳ್ಳ ತಾನು ಯಾರನ್ನು ದೋಚಬೇಕೆಂದು ನಿರ್ಧರಿಸುತ್ತಾನೋ ಅವರ ವಿಶ್ವಾಸಗಳಿಸಿ, ನಂಬಿಕೆಗೆ ಪಾತ್ರನಾಗಿ ಕೊನೆಗೊಂದು ದಿನ ಆ ನಂಬಿಕೆ-ವಿಶ್ವಾಸಗಳಿಗೆ ದ್ರೋಹವೆಸಗಿ ಅವರ ಅಂಗಡಿ ಇಲ್ಲವೇ ಮನೆಯನ್ನು ದೋಚುವುದು! ನಗರದ ನಗ್ರತ್ ಪೇಟೆಯಲ್ಲಿ ಕಂಚನ್ ಚಿನ್ನಾಭರಣಗಳ ಮಾಲೀಕ ಅರವಿಂದ್ ಕುಮಾರ್ ಥಾಡೆ (Arvind Kumar Thade) ಅವರೊಂದಿಗೆ ನಡೆದಿದ್ದು ಇದೇ. ಅವರದ್ದೇ ಸಮುದಾಯದ ಕೇತರಾಮ್ (Ketharam) ಎಂಬ ವಿಶ್ವಾಸದ್ರೋಹಿ, ಕೇವಲ ಎರಡು ತಿಂಗಳು ಹಿಂದೆ ವ್ಯಾಪಾರಿಯ ಸಂಪರ್ಕಕ್ಕೆ ಬಂದು ಕೆಲಸಕ್ಕೆ ಸೇರಿ ಅವರ ಕುಟುಂಬಕ್ಕೂ ಆಪ್ತನಾಗಿದ್ದಾನೆ. ಕಳೆದ ತಿಂಗಳ ಕೊನೆವಾರದಲ್ಲಿ ಅರವಿಂದ್ ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬಕ್ಕಾಗಿ (Diwali festivities) ಮುಂಬೈಗೆ ಹೋದಾಗ, ಕೇತರಾಮ್ ಅವರಿಗೆ ಗೊತ್ತಾಗದ ಈ ಅಂಗಡಿಯ ಬೀಗದ ಕೈಯನ್ನು ತೆಗೆದುಕೊಂಡಿದ್ದಾನೆ. ಬಳಿಕ ರಾಜಸ್ತಾನದಿಂದ ರಾಕೇಶ್ ಹೆಸರಿನ ಸ್ನೇಹಿತನನ್ನು ಕರೆಸಿ ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿಯಿಂದ 4 ಕೇಜಿ ಚಿನ್ನಾಭರಣ, ರೂ. 9 ಲಕ್ಷ ನಗದು ಮತ್ತು ಬೆಳ್ಳಿ ಸಾಮಾನುಗಳನ್ನು ಲಪಟಾಯಿಸಿದ್ದಾನೆ. ಅರವಿಂದ್ ವಾಪಸ್ಸು ಬಂದು ಹಲಸೂರು ಪೊಲೀಸ್ ಠಾನಣೆಯಲ್ಲಿ ದೂರು ದಾಖಲಿಸಿಸದ ಬಳಿಕ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.