Assembly Polls: ಬಾದಾಮಿ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯಗೆ ಜೈ ಅನ್ನುತ್ತಾ ವೇದಿಕೆ ಬಳಿ ಬಂದು ಅವರ ಮುಂದೆ ನಿಂತುಬಿಟ್ಟ!
ಅಭಿಮಾನಿಯೊಬ್ಬ ಸಿದ್ದರಾಮಯ್ಯ ಜೈ ಅನ್ನುತ್ತಾ ವೇದಿಕೆ ಮುಂಭಾಗಕ್ಕೆ ಬರುತ್ತಾನೆ. ಕಾರ್ಯಕರ್ತರು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದಾಗ ಅವರಿಗೆ ತಿರುಗಿ ಬೀಳುತ್ತಾನೆ. ಕೊನೆಗೆ ಪೊಲೀಸರು ಬಂದು ಅವನನ್ನು ಅಲ್ಲಿಂದ ಎಳೆದೊಯ್ಯುತ್ತಾರೆ.
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಹತ್ತು ಹಲವು ಬಗೆಯ ಅಭಿಮಾನಿಗಳಿದ್ದಾರೆ ಮಾರಾಯ್ರೇ. ಹಳೆ ಮೈಸೂರು ಭಾಗದ (Old Mysuru Region) ಜನರ ತೋರುವ ಅಭಿಮಾನವೇ ಬೇರೆ ಉತ್ತರ ಕರ್ನಾಟಕದ ಜನ ತೋರುವ ಪ್ರೀತಿಯೇ ಬೇರೆ. ನಿಮಗೆ ನೆನಪಿದೆಯಾ? ‘ಹೌದಾ ಹುಲಿಯಾ’ (Huliya) ಎಂದ ಸಿದ್ದರಾಮಯ್ಯ ಅಭಿಮಾನಿ ಬೆಳಗಾವಿಯ ಕಾಗವಾಡದವನು. ಈ ವ್ಯಕ್ತಿ ಬೆಂಗಳೂರಿಗೆ ಪ್ರಯಾಣಿಸಿ ಸಿದ್ದರಾಮಯ್ಯನವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದ. ಇದು 4-5 ವರ್ಷಗಳ ಹಿಂದಿನ ಮಾತು. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಎಂದರೆ, ಬಾದಾಮಿಯಲ್ಲಿಂದು ಅವರ ಅಭಿಮಾನಿಯೊಬ್ಬ ಪ್ರಾಯಶಃ ಎಣ್ಣೆ ಹಾಕಿದ್ದ ಅನಿಸುತ್ತೆ, ಮೈಯೆಲ್ಲ ಗುಲಾಲ್ ಚೆಲ್ಲಿಕೊಂಡು, ಸಿದ್ದರಾಮಯ್ಯ ಜೈ ಅನ್ನುತ್ತಾ ವೇದಿಕೆ ಮುಂಭಾಗಕ್ಕೆ ಬರುತ್ತಾನೆ. ಕಾರ್ಯಕರ್ತರು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದಾಗ ಅವರಿಗೆ ತಿರುಗಿ ಬೀಳುತ್ತಾನೆ. ಕೊನೆಗೆ ಪೊಲೀಸರು ಬಂದು ಅವನನ್ನು ಅಲ್ಲಿಂದ ಎಳೆದೊಯ್ಯುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

