Loading video

ಬೆಳಗಾವಿಯಲ್ಲಿ ಕುಡುಕ ಮರಾಠಿ ಯುವಕನಿಂದ ಗೂಂಡಾಗಿರಿ, ಪಿಡಿಒ ಮೇಲೆ ಹಲ್ಲೆ ನಡೆಸುವ ಬೆದರಿಕೆ ಮತ್ತು ನಿಂದನೆ

|

Updated on: Mar 12, 2025 | 2:52 PM

ಕೇವಲ ಪಿಡಿಒ ನಾಗೇಂದ್ರ ಪತ್ತಾರ ಮಾತ್ರ ಅಲ್ಲ, ತನ್ನ ಹಿಂದೆ ನಿಂತಿರುವ ವ್ಯಕ್ತಿಯ ಮೇಲೂ ಹಲ್ಲೆ ನಡೆಸುವ ಬೆದರಿಕೆಯನ್ನು ಕುಡುಕ ಗೂಂಡಾ ಹಾಕುತ್ತಾನೆ. ಇವನ ದಾರ್ಷ್ಟ್ಯತೆ ನೋಡಿ. ತನ್ನ ಬದುಕಿಡೀ ಗೂಂಡಾಗಿರಿಯನ್ನೇ ಮಾಡಿಕೊಂಡು ಬದುಕಿರುವಂತಿದೆ. ಗೃಹ ಸಚಿವ ಪರಮೇಶ್ವರ್ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ ಅನ್ನದೆ ತಾವೇ ಬೆಳಗಾವಿಗೆ ತೆರಳಿ ಒಂದು ಸ್ಪಷ್ಟ ಸಂದೇಶವನ್ನು ಮರಾಠಿ ಗೂಂಡಾಗಳಿಗೆ ರವಾನಿಸಲಿ.

ಬೆಳಗಾವಿ, ಮಾರ್ಚ್ 12 : ಗಡಿ ಜಿಲ್ಲೆಯಲ್ಲಿ ಮರಾಠಿ ಭಾಷಿಕ ಗೂಂಡಾಗಳ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದೆ. ಬೆಳಗಾವಿ ತಾಲ್ಲೂಕಿನ ಕಿಣೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ನಾಗೇಂದ್ರ ಪತ್ತಾರ ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಕುಡಿದು ಸರ್ಕಾರಿ ಕಚೇರಿಗೆ ಬಂದಿದ್ದ ಮರಾಠಿ ಯುವಕನೊಬ್ಬ ಮರಾಠಿ ಭಾಷೆಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಮತ್ತು ಹಲ್ಲೆ ಮಾಡುವ ಬೆದರಿಕೆಯನ್ನೂ ಒಡ್ಡಿದ್ದಾನೆ. ಪ್ರಕರ ಣ ದಾಖಲಿಸಿಕೊಂಡಿರುವ ಬೆಳಗಾವಿ ಪೊಲೀಸರು ಮರಾಠಿ ಗೂಂಡಾನ ನಟ್ಟು ಬೋಲ್ಟು ಟೈಟ್ ಮಾಡದಿದ್ದರೆ ಅವನು ದುಂಡಾವರ್ತನೆ ಮುಂದುವರಿಸುವ ಎಲ್ಲ ಸಾಧ್ಯತೆ ಇದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪುಣೆಯಲ್ಲಿ ಮತ್ತೊಂದು ಕೆಎಸ್ಸಾರ್ಟಿಸಿ ಬಸ್​ಗೆ ಮಸಿ ಬಳಿದ ಉದ್ಧವ್ ಠಾಕ್ರೆ ಶಿವಸೇನೆಯ ಪುಂಡರು