ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ ಊರಿಗೆಲ್ಲ ಊಟ ಹಾಕಿಸಿದ ರೈತ, ವಿಡಿಯೋ ನೋಡಿ
ರೈತರೊಬ್ಬರು ಪ್ರೀತಿಯಿಂದ ಸಾಕಿದ ಎತ್ತಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದ ರೈತ ಮಂಜುನಾಥ್. ತಮ್ಮ ಎತ್ತಿನ ಆರನೇ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಎತ್ತಿಗೆ ಅಲಂಕಾರ ಮಾಡಿ, ಕೇಕ್ ಕತ್ತರಿಸಿ ಗ್ರಾಮಕ್ಕೆ ಊಟ ಹಾಕಿಸಿ ಗಮನಸೆಳೆದಿದ್ದಾರೆ.
ಕೋಲಾರ, (ಡಿಸೆಂಬರ್ 16): ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣ ಬಂದು ರೈತನ ಮಿತ್ರನಂತಿದ್ದ ಎತ್ತುಗಳಿಗೆ ಕೆಲಸವಿಲ್ಲದಂತೆ ಆಗಿದೆ. ಆದರೆ ಮೂಲ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಎತ್ತುಗಳನ್ನು ಸಾಕುತ್ತಿದ್ದಾರೆ. ಅದರಂತೆ ಇಲ್ಲೋರ್ವ ರೈತ, ಪ್ರೀತಿಯಿಂದ ಸಾಕಿದ ಎತ್ತಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದ ರೈತ ಮಂಜುನಾಥ್ ಎನ್ನುವರು ಎತ್ತಿಗೆ ಅದ್ದೂರಿ ಅಲಂಕಾರ ಮಾಡಿ, ಕೇಕ್ ಕತ್ತರಿಸಿ ಗ್ರಾಮದ ನೂರಾರು ಜನರಿಗೆ ಊಟ ಹಾಕಿಸಿ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಇನ್ನು ಇದೇ ವೇಳೆ ಪ್ರೀತಿಯ ಎತ್ತಿಗೆ ವಾಯುಪುತ್ರ ಎಂದು ಹೆಸರಿಟ್ಟಿದ್ದಾರೆ.
ಕಳೆದ ಆರು ವರ್ಷಗಳಿಂದ ಈ ಎತ್ತಿನ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ವಿವಿದೆಡೆ ರಾಸುಗಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದೆ.