ಆರಂಭವಾದ ಕೆಲವೇ ತಿಂಗಳಿಗೆ ಕ್ಲೋಸ್ ಆದ ಕಾರವಾರ ಟನಲ್​ ರೋಡ್; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2023 | 2:53 PM

10 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, 350 ಮೀಟರ್ ಮಾರ್ಗವಿರುವ ಟನಲ್ ನಿರ್ಮಾಣ ಮಾಡಿದ್ದರು.

ಉತ್ತರ ಕನ್ನಡ, ಆ.6: ಕಾರವಾರ(Karwar)ದ ಲಂಡನ್ ಬ್ರಿಡ್ಜ್ ಬಳಿ ಇರುವ ಟನಲ್‌ನಲ್ಲಿ ನೀರು ಸೋರಿಕೆ ಹಿನ್ನಲೆ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಜೊತೆಗೆ ಟನಲ್ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಐಆರ್‌ಬಿಗೆ ಸೂಚನೆ ನೀಡಿದೆ. ಆದರೆ, ಒಂದೂವರೆ ತಿಂಗಳಾದರೂ ಟನಲ್ ಫಿಟ್ನೆಸ್ ಸರ್ಟಿಫಿಕೇಟ್ ನೀಡಲು ಐಅರ್‌ಬಿ ಪರದಾಟ ನಡೆಸುತ್ತಿದೆ.
ಇನ್ನು ಏಳು ತಿಂಗಳ ಹಿಂದೆ ಟನಲ್ ಓಪನ್ ಮಾಡಿದ್ದ ಐಆರ್‌ಬಿ, ಓಪನ್ ಆದ ಕೆಲವೇ ತಿಂಗಳಲ್ಲಿ ಟನಲ್ ಬಂದ್ ಆಗಿದೆ.

ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಟನಲ್ ಓಪನ್ ಮಾಡಿತ್ತಾ ಐಆರ್‌ಬಿ

ಇನ್ನು 10 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, 350 ಮೀಟರ್ ಮಾರ್ಗವಿರುವ ಟನಲ್ ನಿರ್ಮಾಣ ಮಾಡಿದ್ದರು. ಕಾಮಗಾರಿ ಪೂರ್ಣಗೊಳಿಸುವ ಅವಧಿ ಮುಗಿದರೂ ಸಂಚಾರಕ್ಕೆ ಟನಲ್ ಬಳಕೆಯಾಗಿಲ್ಲ. ಜಿಲ್ಲಾಡಳಿತ ಮತ್ತು ಐಆರ್‌ಬಿ ಗುದ್ದಾಟದ ನಡುವೆ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ