AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls 2023: ಮತದಾನ ಬಹಿಷ್ಕರಿಸಿದ ಹಳ್ಳಿಗಳಿಗೆ ರಾತ್ರೋರಾತ್ರಿ ದೌಡಾಯಿಸಿದ ಕೊರಟಗೆರೆ ಶಾಸಕ ಜಿ ಪರಮೇಶ್ವರ

Karnataka Assembly Polls 2023: ಮತದಾನ ಬಹಿಷ್ಕರಿಸಿದ ಹಳ್ಳಿಗಳಿಗೆ ರಾತ್ರೋರಾತ್ರಿ ದೌಡಾಯಿಸಿದ ಕೊರಟಗೆರೆ ಶಾಸಕ ಜಿ ಪರಮೇಶ್ವರ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Apr 11, 2023 | 11:32 AM

Share

ಈ ಬಾರಿ ವಿಧಾನಸಭೆಗೆ ಪುನಃ ಆಯ್ಕೆಯಾದರೆ ಕ್ರಷರ್ ಗಳ ಕೆಲಸ ನಿಲ್ಲಿಸುವುದಾಗಿ ಗ್ರಾಮಸ್ಥರಿಗೆ ಪರಮೇಶ್ವರ್ ಭರವಸೆ ನೀಡುತ್ತಾರೆ.

ತುಮಕೂರು: ಜಿಲ್ಲೆಯ ಕೊರಟಗೆರೆ (Koratagere) ಮತಕ್ಷೇತ್ರದಲ್ಲಿ ಬರುವ ಚಿನಿವಾರಹಳ್ಳಿ ಸೇರಿದಂತೆ 13 ಹಳ್ಳಿಗಳ ಜನರ ಬದುಕು ಸ್ಟೋನ್ ಕ್ರಷರ್ ಗಳಿಂದ (stone crusher) ದುಸ್ತರಗೊಂಡಿದೆ. ಕ್ರಷರ್ ಗಳಿಂದ ಏಳುವ ಧೂಳು ಬೆಳೆದ ಪೈರುಗಳ ಮೇಲೆ ಬಿದ್ದು ಅವು ಹಾಳಾಗುತ್ತಿವೆ ಮತ್ತು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹಾಗಾಗೇ, ಈ ಬಾರಿ ಮತದಾನ ಮಾಡುವುದಿಲ್ಲವೆಂದು ಗ್ರಾಮಗಳ ಜನ ನಿರ್ಧರಿಸಿದಾಗ ಇದುವರೆಗೆ ಕ್ರಷರ್ ಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾಂಗ್ರೆಸ್ ಶಾಸಕ ಜಿ ಪರಮೇಶ್ವರ್  (G Parameshwar) ರಾತ್ರೋರಾತ್ರಿ ಚಿನಿವಾರಹಳ್ಳಿಗೆ ದೌಡಾಯಿಸಿ ಜನರ ಮನವೊಲಿಕೆಗೆ ಮುಂದಾಗುತ್ತಾರೆ. ಜಿಲ್ಲಾಧಿಕಾರಿಗೆ ಪೋನಾಯಿಸಿ ಕ್ರಮ ಜರುಗಿಸುವಂತೆ ಹೇಳುತ್ತಾರೆ. ನಂತರ ಅವರು ಈ ಬಾರಿ ವಿಧಾನಸಭೆಗೆ ಪುನಃ ಆಯ್ಕೆಯಾದರೆ ಕ್ರಷರ್ ಗಳ ಕೆಲಸ ನಿಲ್ಲಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡುತ್ತಾರೆ. ಜನ ವೋಟು ಹಾಕುತ್ತಾರೋ ಇಲ್ಲವೋ ಕಾದುನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.