ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ

Edited By:

Updated on: Nov 26, 2025 | 7:46 PM

ಗೋವುಗಳನ್ನ ಸಾಗಿಸುತ್ತಿದ್ದ ಲಾರಿಯನ್ನ ತಡೆದು ಪರಿಶೀಲನೆ ಮಾಡಿದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದ ಬಳಿ ನಡೆದಿದೆ. ಅಫಜಲಪುರದಿಂದ ಆಳಂದ ಕಡೆಗೆ ತೆರಳುತ್ತಿದ್ದ ಗೋವು ತುಂಬಿದ್ದ ಲಾರಿಯನ್ನು ರೋಹಿತ್ ಮತ್ತು ಅನೀಲ್ ತಡೆ ನಿಲ್ಲಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿಯಾಗಿದೆ. ದಾಖಲಾತಿ ಜೊತೆಗೆ ಅನುಮತಿ ಪಡೆದು ಗೋವು ಸಾಗಾಟ ಮಾಡುತ್ತಿರುವ ಗಾಡಿಯನ್ನ ತಡೆಯುತ್ತಿರಾ ಎಂದು ರೋಹಿತ್ ಮತ್ತು ಅನೀಲ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ

ಕಲಬುರಗಿ, (ನವೆಂಬೆರ್ 26): ಗೋವುಗಳನ್ನ ಸಾಗಿಸುತ್ತಿದ್ದ ಲಾರಿಯನ್ನ ತಡೆದು ಪರಿಶೀಲನೆ ಮಾಡಿದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದ ಬಳಿ ನಡೆದಿದೆ. ಅಫಜಲಪುರದಿಂದ ಆಳಂದ ಕಡೆಗೆ ತೆರಳುತ್ತಿದ್ದ ಗೋವು ತುಂಬಿದ್ದ ಲಾರಿಯನ್ನು ರೋಹಿತ್ ಮತ್ತು ಅನೀಲ್ ತಡೆ ನಿಲ್ಲಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿಯಾಗಿದೆ. ದಾಖಲಾತಿ ಜೊತೆಗೆ ಅನುಮತಿ ಪಡೆದು ಗೋವು ಸಾಗಾಟ ಮಾಡುತ್ತಿರುವ ಗಾಡಿಯನ್ನ ತಡೆಯುತ್ತಿರಾ ಎಂದು ರೋಹಿತ್ ಮತ್ತು ಅನೀಲ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ