ಸಿಎಂ ಕುರ್ಚಿ ಕಿತ್ತಾಟಕ್ಕೆ ಸ್ಫೋಟಕ ತಿರುವು: ಡಿಕೆಶಿ ಭೇಟಿ ಬೆನ್ನಲ್ಲೇ ಆಟ ಶುರು ಮಾಡಿದ ಸತೀಶ್ ಜಾರಕಿಹೊಳಿ
ಶಾಸಕರ ಮನಗೆಲ್ಲೋ ಪ್ರಯತ್ನ, ಸಚಿವರ ವಿಶ್ವಾಸ ಗಳಿಸೋ ಯತ್ನ. ಒಂದಲ್ಲ ಒಂದು ಪ್ರಯತ್ನದಲ್ಲಿರೋ ಡಿಸಿಎಂ ಡಿ.ಕೆ ಶಿವಕುಮಾರ್ ದಿನಕ್ಕೊಂದು ತಂತ್ರ ರೂಪಿಸುತ್ತಿದ್ದಾರೆ. ಮೂನ್ನೆ ಮೊನ್ನೆಯಷ್ಟೇ ಸಚಿವ ಕೆ.ಜೆ ಜಾರ್ಜ್ ಭೇಟಿಯಾಗಿದ್ದ ಡಿಕೆಶಿ, ನಿನ್ನೆಯಷ್ಟೇ ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ ಜೊತೆ ಡಿಕೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿಯರನ್ನ ಭೇಟಿಯಾಗಿ ಚರ್ಚೆ ನಡೆಸಿರುವುದು ಅಚ್ಚರಿ ಮೂಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸತೀಶ್ ಜಾರಕಿಹೊಳಿ ಶಾಸಕರ ಲಂಚ್ ಮೀಟಿಂಗ್ ಮಾಡಿದ್ದು, ಕುತೂಹಲ ಮೂಡಿಸಿದೆ.
ಬೆಂಗಳೂರು, (ನವೆಂಬರ್ 26): ಶಾಸಕರ ಮನಗೆಲ್ಲೋ ಪ್ರಯತ್ನ, ಸಚಿವರ ವಿಶ್ವಾಸ ಗಳಿಸೋ ಯತ್ನ. ಒಂದಲ್ಲ ಒಂದು ಪ್ರಯತ್ನದಲ್ಲಿರೋ ಡಿಸಿಎಂ ಡಿ.ಕೆ ಶಿವಕುಮಾರ್ ದಿನಕ್ಕೊಂದು ತಂತ್ರ ರೂಪಿಸುತ್ತಿದ್ದಾರೆ. ಮೂನ್ನೆ ಮೊನ್ನೆಯಷ್ಟೇ ಸಚಿವ ಕೆ.ಜೆ ಜಾರ್ಜ್ ಭೇಟಿಯಾಗಿದ್ದ ಡಿಕೆಶಿ, ನಿನ್ನೆಯಷ್ಟೇ ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ ಜೊತೆ ಡಿಕೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿಯರನ್ನ ಭೇಟಿಯಾಗಿ ಚರ್ಚೆ ನಡೆಸಿರುವುದು ಅಚ್ಚರಿ ಮೂಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸತೀಶ್ ಜಾರಕಿಹೊಳಿ ಶಾಸಕರ ಲಂಚ್ ಮೀಟಿಂಗ್ ಮಾಡಿದ್ದು, ಕುತೂಹಲ ಮೂಡಿಸಿದೆ.
ಹೌದು..ಸತೀಶ್ ಜಾರಕಿಹೊಳಿ ಇಂದು (ನವೆಂಬರ್ 26) ಶಾಸಕರ ಭವನದಲ್ಲಿ ಮೊದಲು ಸಭೆ ನಡೆಸಿದ್ದಾರೆ. ಬಳಿಕ ಶಾಸಕರನ್ನು ಊಟಕ್ಕೆಂದು ಬೆಂಗಳೂರಿನ ಖಾಸಗಿ ಹೋಟೆಲ್ಗೆ ಕರೆದೊಯ್ದು ಮಹತ್ವದ ಚರ್ಚೆ ಮಾಡಿದ್ದಾರೆ. ಶಾಸಕರಾದ ಆಸೀಫ್ ಸೇಠ್, ಕಂಪ್ಲಿ ಗಣೇಶ್, ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ್, ಯಾಸೀರ್ ಖಾನ್ ಪಠಾಣ್, ಪ್ರಕಾಶ್ ಕೋಳಿವಾಡ, ಪಾವಗಡ ವೆಂಕಟೇಶ್, ಹಂಪಯ್ಯ ನಾಯಕ್ ಸತೀಶ್ ಜಾರಕಿಹೊಳಿ ಲಂಚ್ ಮೀಟಿಂಗ್ನಲ್ಲಿ ಭಾಗಿಯಾದ್ದು, ಸತೀಶ್ ಜಾರಕಿಹೊಳಿ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಭೇಟಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಶಾಸಕರ ಸಭೆ ನಡೆಸಿದ್ಯಾಕೆ? ಏನಿದರ ಗುಟ್ಟು? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.

