Muharram: ಮೊಹರಂ ವೇಳೆ ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ

| Updated By: ಆಯೇಷಾ ಬಾನು

Updated on: Jul 18, 2024 | 1:58 PM

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೀರಲಕೊಪ್ಪ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಹಿಂದೂ ಯುವಕನೋರ್ವ ಅಗ್ನಿಕುಂಡಕ್ಕೆ ಪ್ರವೇಶ ಮಾಡಿ ಕಂಬಳಿ ಹಾಸಿ ದೇವರ ಮುಂದೆ ಮೂರು ಬಾರಿ ಮಂಡಿಯೂರಿ ಶಿರ ಬಾಗಿ ನಮಸ್ಕರಿಸಿದ್ದಾರೆ. ಸದ್ಯ ಯುವಕನ ಈ ವಿಡಿಯೋ ವೈರಲ್ ಆಗುತ್ತಿದೆ.

ಬಾಗಲಕೋಟೆ, ಜುಲೈ.18: ಮುಸ್ಲಿಮರ ಹೊಸ ವರ್ಷ ಹಾಘೂ ಪವಿತ್ರ ಹಬ್ಬವಾಗಿರುವ ಮೊಹರಂ (Muharram) ಭಾವೈಕ್ಯತೆಯ ಸಂಕೇತ. ಈ ಹಬ್ಬವನ್ನು ಜಾತಿ, ಧರ್ಮ ಮರೆತು ಎಲ್ಲಾ ಧರ್ಮದವರು ಒಂದಾಗಿ ಆಚರಿಸುತ್ತಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೀರಲಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ಮೊಹರಂ ಆಚರಿಸಲಾಗಿದೆ. ಈ ವೇಳೆ ಮೊಹರಂ ಅಗ್ನಿಕುಂಡದಲ್ಲೇ ಹಿಂದೂ ಯುವಕನೋರ್ವ ನಮಾಜ್ ಮಾಡಿದಂತೆ ದೇವರಲ್ಲಿ ಪ್ರಾರ್ಥಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೊಹರಂ ಹಬ್ಬದ ಹಿನ್ನೆಲೆ ಆಲೆ ದೇವರ ಮೆರವಣಿವೆ ವೇಳೆ ಈ ಘಟನೆ ನಡೆದಿದೆ. ಹಸೇನ್‌ ಹುಸೇನ್ ಮೌಲಾ ದರ್ಗಾದ ಎದುರು ಅಗ್ನಿಕುಂಡ ಹಾಕಲಾಗಿತ್ತು. ಫಕ್ಕೀರಪ್ಪ ಕುರಿ ಎಂಬ ಹಿಂದೂ ಯುವಕ ಅಗ್ನಿಕುಂಡ ಪ್ರವೇಶಿಸಿ ಕಂಬಳಿ ಹಾಸಿ ಮೂರು ಬಾರಿ ಮಂಡಿಯೂರಿ ಶಿರ ಬಾಗಿ ದೇವರನ್ನು ನಮಸ್ಕರಿಸಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ