ಅಪ್ಪ ಗಳಿಸಿದ ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ವಿವೇಕಹೀನ ಯುವಕ

|

Updated on: Jun 29, 2024 | 10:55 AM

ಹಣ ಚೆಲ್ಲುವುದರ ಬಗ್ಗೆ ಕಾನೂನು ಏನು ಹೇಳುತ್ತದೆ ಅನ್ನೋದನ್ನು ಕಾನೂನು ಪರಿಣಿತರಿಂದ ಇಲ್ಲವೇ ಪೊಲೀಸ್ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಬೇಕು. ಅದು ಅಪರಾಧವೇ ಅಂತಾದರೆ ನಿಷ್ಕ್ರಿಯತೆಗೆ ಹೆಸರಾಗಿರುವ ಹುಬ್ಬಳ್ಳಿಯ ಪೊಲೀಸರು ಈ ಯುವಕರ ವಿರುದ್ಧ ಕೇಸು ದಾಖಲಿಸಬೇಕು. ತಾವು ಮಾಡಿದ್ದು ತಪ್ಪು ಅಂತ ಮನವರಿಕೆಯಾಗುವ ಶಿಕ್ಷೆಯನ್ನು ಅವರಿಗೆ ನೀಡಬೇಕು

ಹುಬ್ಬಳ್ಳಿ: ದುಡ್ಡಿನ ಮದ ಹೇಗಾಡಿಸುತ್ತೆ ಅಂತ ನೋಡಿ. ಹತ್ತು ರೂಪಾಯಿ ದುಡಿಯುವ ಯೋಗ್ಯತೆ ಇಲ್ಲದ ಯುವಕರು ತಮ್ಮ ಗೆಳೆಯನೊಬ್ಬನ ಹುಟ್ಟುಹಬ್ಬ ಆಚರಣೆಯಲ್ಲಿ ರೂ. 500 ಮುಖಬೆಲೆಯ ನೋಟುಗಳನ್ನು ಗಾಳಿಗೆ ತೂರಿ ಅವು ನೆಲಕ್ಕೆ ಬಿದ್ದ ಬಳಿಕ ಅವುಗಳನ್ನು ತುಳಿಯುತ್ತಾ ಕುಣಿಯುತ್ತಿದ್ದಾರೆ! ಹುಬ್ಬಳ್ಳಿಯಲ್ಲಿ ತನ್ವೀರ್ ಹೆಸರಿನ ಒಬ್ಬ ಈಡಿಯಟ್ ನ ಬರ್ತ್​ಡೇ ಆಚರಣೆಯಲ್ಲಿ ಕಂಡು ಬಂದಿರುವ ದೃಶ್ಯವಿದು. ಅವನಪ್ಪ ಬೇಜಾನ್ ಸಂಪಾದನೆ ಮಾಡಿ ಮನೆಯಲ್ಲಿ ದುಡ್ಡು ಮಡಗಿರಬಹುದು. ಬಾಪ್ ಕೀ ಕಮಾಯಿಯನ್ನು ಬೇಟಾ ಹೀಗೆ ಚೆಲ್ಲಿ ವಿಕೃತಾನಂದ ಅನುಭವಿಸುತ್ತಿದ್ದಾನೆ. ಹಣ ಚೆಲ್ಲಿ ಅದನ್ನು ತುಳಿದು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಯಾವ ಸೀಮೆಯ ಸಂಪ್ರದಾಯ ಸ್ವಾಮಿ? ಅವರಲ್ಲಿ ದುಡ್ಡು ಜಾಸ್ತಿಯಾಗಿದ್ದರೆ ಹುಬ್ಳಳ್ಳಿಯಲ್ಲಿರುವ ಬಡವರ ಮನೆಗಳಿಗೆ ಹೋಗಿ ಹಣ ಹಂಚಲಿ, ಇಲ್ಲವೇ ನಗರದಲ್ಲಿ ಹಲವು ಅನಾಥಾಶ್ರಮಗಳಿವೆ. ಅಲ್ಲಿಗೆ ಹೋಗಿ ದಾನ ಮಾಡಲಿ, ಐದಾರು ಮೂಟೆ ಅಕ್ಕಿಯನ್ನು ಅಲ್ಲಿಗೆ ತಲುಪಿಸಲಿ, ಹೌದು ತಾನೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಎಲ್ಲವೂ ರೆಡಿ ಇದೆ, ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ’; ಬರ್ತ್​ಡೇ ದಿನ ರವಿಚಂದ್ರನ್ ಘೋಷಣೆ

Follow us on