Chamarajanagar: ಬಂಡೀಪುರದ ಆನೆ ಶಿಬಿರದಲ್ಲಿ ಅನಾಥವಾಗಿದ್ದ ಹೆಣ್ಣು ಅನೆಮರಿಯೊಂದಕ್ಕೆ ಯುವ ಕಾವಾಡಿ ದಂಪತಿಯೇ ಅಪ್ಪ-ಅಮ್ಮ
ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ!
ಚಾಮರಾಜನಗರ: ಮಾನವ ಮತ್ತು ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯದ ಮತ್ತೊಂದು ಕಥೆಯಿದು. ಜಿಲ್ಲೆ ಬಂಡೀಪುರ ಅಭಯಾರಣ್ಯದಲ್ಲಿರುವ (Bandipur Reserve Forest) ರಾಂಪುರ ಆನೆ ಶಿಬಿರದಲ್ಲಿ ತನ್ನ ಹೆತ್ತಮ್ಮಳಿಂದ ಬೇರೆಯಾದ 7-ದಿನದ ಹೆಣ್ಣು ಆನೆಮರಿಯೊಂದಕ್ಕೆ (baby elephant) ಅದೇ ಶಿಬಿರದಲ್ಲಿ ಕೆಲಸ ಮಾಡುವ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ಸಲಹುತ್ತಿದ್ದಾರೆ, ಪೋಷಿಸುತ್ತಿದ್ದಾರೆ. ದಯಾಳು ದಂಪತಿ ತಮ್ಮ ಆನೆಮರಿಗೆ ವೇದಾ (Veda) ಅಂತ ನಾಮಕರಣ ಕೂಡ ಮಾಡಿದ್ದಾರೆ. 7-ದಿನದ ಮರಿಯಾಗಿದ್ದಾಗ ರಾಜು (Raju) ಮತ್ತು ರಮ್ಯಾರ (Ramya) ಮಡಿಲು ಸೇರಿದ ವೇದಾಗೆ ಈಗ 7-ತಿಂಗಳ ಪ್ರಾಯ. ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ! ವೇದ ಮತ್ತು ರಾಜು ದಂಪತಿಯ ಅನುಬಂಧಕ್ಕೆ ಯಾರ ದೃಷ್ಟಿಯೂ ತಾಕದಿರಲಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
