Operation Sindoor: ಭಾರತದ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಮುಡ್ರಿಕೆ ನಗರದ ಮಸೀದಿಯೊಂದು ನೆಲಸಮ

Updated on: May 07, 2025 | 12:34 PM

ನಗರದ ಸರ್ಕಾರೀ ಅರೋಗ್ಯ ಮತ್ತು ಶೈಕ್ಷಣಿಕ ಕೇಂದ್ರದ ಬಳಿ ಒಂದು ಬಾಂಬ್ ನಿಷ್ಕ್ರಿಯ ದಳದ ವಾಹನ ಕೂಡ ಓಡಾಡುತ್ತಿದೆ. ಭಾರತೀಯ ಕ್ಷಿಪಣಿಗಳು ನಿನ್ನೆ ರಾತ್ರಿ ದಾಳಿ ನಡೆಸಿವೆ ಮತ್ತು ಸದ್ದಿಗೆ ಜನ ಎದ್ದು ಕೂತಿದ್ದಾರೆ. ಆದರೆ ನಾಗರಿಕರು ವಾಸವಾಗಿರುವ ಜಾಗಗಳನ್ನು ಭಾರತೀಯ ಸೇನೆ ಗುರಿಯಾಗಿಸಿಲ್ಲ, ಯುದ್ಧದ ಸ್ಥಿತಿಯಲ್ಲೂ ಭಾರತೀಯ ಸೇನೆಗಳು ಮಾನವೀಯತೆಯನ್ನು ಮರೆಯಲ್ಲ. ಪಾಕಿಸ್ತಾನಕ್ಕೆ ಇದು ಅರ್ಥವಾದೀತೆ?

ಬೆಂಗಳೂರು, ಮೇ 7: ಮಾಡಿದ್ದುಣ್ಣೋ ಮಹಾರಾಯ ಅಂತ ಉಗ್ರರ ನೆಲೆಗಳ ಭಾರತ ದಾಳಿ ನಡೆಸಿದ ದೃಶ್ಯಗಳನ್ನು ಟಿವಿಗಳಲ್ಲಿ ವೀಕ್ಷಿಸುತ್ತಿರುವ ಬೇರೆ ದೇಶಗಳು ಪಾಕಿಸ್ತಾನಕ್ಕೆ ಹೇಳುತ್ತಿರಬಹುದು. ಪಾಕಿಸ್ತಾನದ ಮುಡ್ರಿಕೆ ನಗರದಲ್ಲಿ (Mudrike city in Pakistan) ನಡೆಯುತ್ತಿರುವ ಚಟುವಟಿಕೆಗಳಿಂದ ಅಲ್ಲಿ ಏನು ಸಂಭವಿಸಿದೆ ಅನ್ನೋದನ್ನು ಊಹಿಸಬಹುದು. ನಗರದ ಒಂದು ಮಸೀದಿಯ ಮೇಲೆ ನಿನ್ನೆ ರಾತ್ರಿ ಭಾರತೀಯ ಸೇನೆ ದಾಳಿ ನಡೆಸಿದ್ದು ಅದು ನೆಲಸಮಗೊಂಡಿದೆ. ಮುಡ್ರಿಕೆ ನಗರದ ಸರ್ಕಾರೀ ಅರೋಗ್ಯ ಮತ್ತು ಶೈಕ್ಷಣಿಕ ಕೇಂದ್ರದ ಮುಂದೆ ಜನ ಓಡಾಡುವುದು ಮತ್ತು ಅಂಬ್ಯುಲೆನ್ಸ್ ಅಲ್ಲಿಗೆ ಆಗಮಿಸುವುದನ್ನು ಸಹ ದೃಶ್ಯಗಳಲ್ಲಿ ನೋಡಬಹುದು.

ಇದನ್ನೂ ಓದಿ:  ಭಾರತದ ದಾಳಿಯಿಂದ ಕೋಪಗೊಂಡು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡು ಹಾರಿಸಿದ ಪಾಕ್, 10 ನಾಗರಿಕರು ಸಾವು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ