Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯಪ್ಪಸ್ವಾಮಿ ಮಾಲೆಧಾರಿಗಳಿಗೆ ಪ್ರತಿವರ್ಷ ಅನ್ನಪ್ರಸಾದ ವ್ಯವಸ್ಥೆ ಮಾಡುತ್ತಿರುವ ರಾಯಚೂರಿನ ಮುಸ್ಲಿಂ ಕುಟುಂಬ

ಅಯ್ಯಪ್ಪಸ್ವಾಮಿ ಮಾಲೆಧಾರಿಗಳಿಗೆ ಪ್ರತಿವರ್ಷ ಅನ್ನಪ್ರಸಾದ ವ್ಯವಸ್ಥೆ ಮಾಡುತ್ತಿರುವ ರಾಯಚೂರಿನ ಮುಸ್ಲಿಂ ಕುಟುಂಬ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 31, 2024 | 11:56 AM

ಸಮುದಾಯಗಳ ನಡುವೆ ಭಾವೈಕ್ಯತೆಯ ಅವಶ್ಯಕತೆಯಿದೆ, ಸಹೋದರತ್ವ ಮತ್ತು ಸಹಬಾಳ್ವೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಮೇಳೈಸಿವೆ, ಯಾರನ್ನೂ ಮೆಚ್ಚಿಸಲು ನಾವು ಇದನ್ನು ಮಾಡುತ್ತಿಲ್ಲ ಎಂದು ಕರೀಂ ಸಾಬ್ ಹೇಳುತ್ತಾರೆ. ಈ ಕುಟುಂಬದ ಭ್ರಾತೃತ್ವ ಮತ್ತು ಬೇರೆ ಧರ್ಮಗಳು ಮತ್ತ್ತು ಅವುಗಳ ಆಚರಣೆಯ ಬಗ್ಗೆ ಇರುವ ಆದರಣೆ ಹಾಗೂ ಪ್ರೀತಿ ನಿಜಕ್ಕೂ ಅನುಕರಣೀಯ.

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಮುಸ್ಲಿಂ ಕುಟುಂಬವೊಂದು ಅಯ್ಯಪ್ಪ ಮಾಲೆಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಪಟ್ಟಣದ ಬಿಎ ಕರೀಂ ಸಾಬ್ ಅವರ ಕುಟುಂಬವು ಕಳೆದ ಮೂರು ವರ್ಷಗಳಿಂದ ಮಾಲೆಧಾರಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡುತ್ತಿದೆ. ಅವರ ಮನೆಯಲ್ಲಿ ಮಾಲೆಧಾರಿ ಅಯ್ಯಪ್ಪ ಭಕ್ತರು ಸಾಲಾಗಿ ಕುಳಿತು ಊಟ ಮಾಡುವುದನ್ನು ಮತ್ತು ಕರೀಂಸಾಬ್ ಮತ್ತು ಅವರ ಕುಟುಂಬದ ಸದಸ್ಯರು ಊಟ ಬಡಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಊಟದ ನಂತರ ಭಕ್ತರು ಕೂತಲ್ಲೇ ಕೈತೊಳೆಯುವ ಏರ್ಪಟು ಸಹ ಮುಸ್ಲಿಂ ಕುಟುಂಬ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು