ವಿದ್ಯಾರ್ಥಿನಿ ಮೇಲೆ ಅಟ್ಯಾಕ್ ಮಾಡಿದ ಬೀದಿ ನಾಯಿಗಳ ಹಿಂಡು; ಬಾಲಕಿ ಜಸ್ಟ್ ಮಿಸ್, ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಕರ್ನಾಟಕದ ಹಲವೆಡೆ ಬೀದಿನಾಯಿಗಳ ಹಾವಳಿ ಮೀತಿಮೀರಿದ್ದು, ಹಲವಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅದರಂತೆ ಇದೀಗ ಉಡುಪಿಯ ಹೂಡೆ ಪರಿಸರದಲ್ಲಿ ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ನಾಲ್ಕೈದು ನಾಯಿಗಳು ಒಮ್ಮೆಲೇ ಅಟ್ಯಾಕ್ ಮಾಡಿದೆ. ಇದರಿಂದ ವಿದ್ಯಾರ್ಥಿ ಬಚಾವ್ ಆಗಿದ್ದು, ನಾಯಿ ದಾಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಉಡುಪಿ, ಆ.10: ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ. ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಿದ್ದು, ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ನಾಯಿಗಳು ನುಗ್ಗಿದೆ. ನಾಲ್ಕೈದು ನಾಯಿಗಳು ಒಮ್ಮೆಲೇ ಅಟ್ಯಾಕ್ ಮಾಡಿದ ಹಿನ್ನೆಲೆಯಲ್ಲಿ ಬಾಲಕಿ ಕೂಗಿ ಬೊಬ್ಬೆ ಹಾಕಿದ್ದಾರೆ. ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ವಿದ್ಯಾರ್ಥಿನಿ ಬಚಾವಾಗಿದ್ದಾರೆ. ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹೂಡೆ ಪರಿಸರದಲ್ಲಿ ಬೀದಿ ನಾಯಿಗಳ ಕಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಈ ಬೀದಿ ನಾಯಿಗಳ ಕಾಟದಿಂದ ಮುಕ್ತಿ ನೀಡುವಂತೆ ಹಲವು ದಿನಗಳಿಂದ ಸ್ಥಳೀಯರು ಬೇಡಿಕೆಯಿಡುತ್ತಲೇ ಇದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ