ಸಂಸದ ವಿ ಶ್ರೀನಿವಾಸ ಪ್ರಸಾದ್ ಸಾವು, ಶೋಕಸಾಗರದಲ್ಲಿ ಮುಳುಗಿರುವ ಅಪಾರ ಬಂಧುವರ್ಗ, ಅಭಿಮಾನಿಗಳು
ಶ್ರೀನಿವಾಸ್ ಹಳೆ ಮೈಸೂರು ಭಾಗದಲ್ಲಿ ಬಹಳ ಪ್ರಭಾವಿ ನಾಯಕರಾಗಿದ್ದೆನ್ನುವುದು ನಿರ್ವಿವಾದಿತ. ಹಾಗಾಗೇ, ಅವರು ರಾಜಕಾರಣದಿಂದ ದೂರವುಳಿದರೂ, ನೆರವು ಮತ್ತು ಬೆಂಬಲ ಕೋರಲು ರಾಜ್ಯದ ಪ್ರಮುಖ ನಾಯಕರು ಅವರ ಮನೆಗೆ ಬೇಟಿ ನೀಡಿದ್ದರು.
ಮೈಸೂರು: ಸುಮಾರು ಐದಾರು ತಿಂಗಳು ಹಿಂದಷ್ಟೇ ರಾಜಕೀಯ ಬದುಕಿಗೆ ವಿದಾಯ ಹೇಳಿ ವಿಶ್ರಾಂತ ಜೀವನ ನಡೆಸುತ್ತಿದ್ದ 76-ವರ್ಷ ವಯಸ್ಸಿನ ಶ್ರೀನಿವಾಸ್ ಪ್ರಸಾದ್ (V Srinivas Prasad) ಸಾವು ಅವರ ಅಪಾರ ಬಂಧುವರ್ಗ, ಅಭಿಮಾನಿ, ಬೆಂಬಲಿಗರಲ್ಲದೆ ನಾಡಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅವರ ಸಹೋದರಿಯೊಬ್ಬರು (sister) ಇಲ್ಲಿ ರೋದಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಂದು ಸಮೃದ್ಧ ರಾಜಕೀಯ ಬದುಕು ನಡೆಸಿದ ಪ್ರಸಾದ್ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀರ ಹದಗೆಟ್ಟಿ ಮತ್ತು ಆ ಕಾರಣಕ್ಕಾಗೇ ಅವರು ಲೋಕಸಭಾ ಚುನಾವಣೆಯಲ್ಲಿ (Lok Sabha Polls) ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಶ್ರೀನಿವಾಸ್ ಹಳೆ ಮೈಸೂರು ಭಾಗದಲ್ಲಿ ಬಹಳ ಪ್ರಭಾವಿ ನಾಯಕರಾಗಿದ್ದೆನ್ನುವುದು ನಿರ್ವಿವಾದಿತ. ಹಾಗಾಗೇ, ಅವರು ರಾಜಕಾರಣದಿಂದ ದೂರವುಳಿದರೂ, ನೆರವು ಮತ್ತು ಬೆಂಬಲ ಕೋರಲು ರಾಜ್ಯದ ಪ್ರಮುಖ ನಾಯಕರು ಅವರ ಮನೆಗೆ ಬೇಟಿ ನೀಡಿದ್ದರು. ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಸಾದ್ ರನ್ನು ಭೇಟಿಯಾದ ಪ್ರಮುಖ ನಾಯಕರೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಹೆಚ್ ಸಿ ಮಹದೇವಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಕೃಷ್ಣದತ್ ಒಡೆಯರ್.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಬಿಜೆಪಿಗೆ ಬಿಗ್ ಶಾಕ್, ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಬೆನ್ನಲ್ಲೇ ಈಗ ಸಹೋದರ ಕಾಂಗ್ರೆಸ್ ಸೇರ್ಪಡೆ