Karnataka Assembly Election: ತಾಯಿ ಕಳೆದುಕೊಂಡ ದುಃಖ ಮೆಟ್ಟಿ ಗದಗಿನ ಪೊಲೀಸ್ ಕಾನ್​ಸ್ಟೇಬಲ್ ಅಶೋಕ್ ಗದಗ ಚುನಾವಣಾ ಕರ್ತವ್ಯಕ್ಕೆ ಹಾಜರಾದರು!

|

Updated on: May 09, 2023 | 3:00 PM

ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಠಾಣೆಯ ಇತರ ಪೊಲೀಸ್ ಸಿಬ್ಬಂದಿ ನಗರದ ಜೆಟಿ ಕಾಲೇಜು ಅವರಣದಲ್ಲಿ ಸನ್ಮಾನಿಸಿತು.

ಗದಗ: ನಗರದ ಗದಗ ಬಡಾವಣೆ ಠಾಣೆಯ ಪೊಲೀಸ್ ಕಾನ್​​ಸ್ಟೇಬಲ್ ಅಶೋಕ ಗದಗ (Ashok Gadag) ಅವರ ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆ (sense of duty) ಅಸಾಮಾನ್ಯವಾದದ್ದು ಅಂತ ಹೇಳಿದರರೆ ಅದು ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ವಿಷಯವೇನು ಗೊತ್ತಾ? ಅಶೋಕ್ ನಿನ್ನೆಯಷ್ಟೇ ತಮ್ಮ ತಾಯಿ ಶಂಕ್ರಮ್ಮ ಗದಗ ಅವರನ್ನು (Shankramma) ದೀರ್ಘಕಾಲದ ಅನಾರೋಗ್ಯದ ಬಳಿಕ ನಿನ್ನೆ ಕಳೆದುಕೊಂಡಿದ್ದಾರೆ. ನಿನ್ನೆ ಸಾಯಂಕಾಲದವರೆಗೆ ತಾಯಿಯ ಅಂತ್ಯಕ್ರಿಯೆ ಹಾಗೂ ವಿಧಿವಿಧಾನಗಳನ್ನು ಪೂರೈಸಿದ ಅಶೋಕ್ ಇಂದು ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಠಾಣೆಯ ಇತರ ಪೊಲೀಸ್ ಸಿಬ್ಬಂದಿ ನಗರದ ಜೆಟಿ ಕಾಲೇಜು ಅವರಣದಲ್ಲಿ ಸನ್ಮಾನಿಸಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ