ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿ ಕುಸಿತ: ತಪ್ಪಿದ ಅನಾಹುತ

Updated By: Ganapathi Sharma

Updated on: Dec 11, 2025 | 1:07 PM

ಮೈಸೂರು ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ಬೈಕ್ ಮೇಲೆ ಕುಸಿದುಬಿದ್ದಿದೆ. ಅದೃಷ್ಟವಶಾತ್, ಘಟನೆ ಸಂದರ್ಭದಲ್ಲಿ ಜನರು ಅಲ್ಲಿ ಇಲ್ಲದೇ ಇದ್ದುದರಿಂದ ಅನಾಹುತ ತಪ್ಪಿದೆ. ಸದ್ಯ ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಜನರು ಹೋಗದಂತೆ ನೋಡಿಕೊಳ್ಳಲಾಗಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಡಿಸೆಂಬರ್ 11: ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ಕುಸಿತವಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ಸ್ವಲ್ಪ ಪ್ರಮಾಣದಲ್ಲಿ ಕುಸಿದುಬಿದ್ದಿದೆ. ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಬಿದ್ದಿದೆ. ಜನರು ಇಲ್ಲದ ವೇಳೆ ಕುಸಿದಿದ್ದರಿಂದ ಅನಾಹುತ ತಪ್ಪಿದೆ. ಘಟನೆ ಬಳಿಕ ಗೇಟ್ ಬಳಿ ಸಿಬ್ಬಂದಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 11, 2025 01:02 PM