ಮೂಡಿಗೆರೆ: ಖಾಸಗಿ ಬಸ್ಸೊಂದರ ನಿರ್ವಾಹಕ ಮತ್ತು ಚಾಲಕನ ಪ್ರಮಾದದಿಂದ ವಿದ್ಯಾರ್ಥಿನಿಯೊಬ್ಬಳ ಬದುಕು ಕೊನೆಗೊಳ್ಳುತಿತ್ತು

ಅದರೆ ಒಬ್ಬ ವಿದ್ಯಾರ್ಥಿನಿ ಬಸ್ ಹತ್ತಿ ಒಳಗೆ ಹೋಗುವ ಮೊದಲೇ ಬಸ್ ಚಲಿಸಲಾರಂಭಿಸುತ್ತದೆ. ಮೊದಲ ಮೆಟ್ಟಿಲು ಮಾತ್ರ ಹತ್ತಿದ್ದ ವಿದ್ಯಾರ್ಥಿನಿ ಆಯತಪ್ಪಿ ಹೊರಗೆ ಬೀಳುತ್ತಾಳೆ ಮತ್ತು ಹಿಂದಿನ ಚಕ್ರ ತನ್ನ ಮೇಲೆ ಹತ್ತುವುದರಿಂದ ಸ್ವಲ್ಪದರಲ್ಲಿ ಪಾರಾಗುತ್ತಾಳೆ.

TV9kannada Web Team

| Edited By: Arun Belly

Jun 30, 2022 | 2:20 PM

Dakshina Kannada:  ಈ ಖಾಸಗಿ ಬಸ್ಸಿನ (private bus) ಚಾಲಕ ಮತ್ತು ನಿರ್ವಾಹಕ ಇಬ್ಬರನ್ನೂ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಅಳ್ವಾಸ್ ಕಾಲೇಜು (Alva’s college) ಹತ್ತಿರ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ಈ ಭಯಾನಕಅ ದೃಶ್ಯವನ್ನು ನೋಡಿ. ಬಸ್ ನಿಲ್ದಾಣದಲಲ್ಲಿ ಬಂದು ನಿಂತ ನಂತರ ಕೆಲವರು ಇಳಿಯುತ್ತಾರೆ ಮತ್ತು ಕೆಲವರು ಹತ್ತುತ್ತಾರೆ. ಅದರೆ ಒಬ್ಬ ವಿದ್ಯಾರ್ಥಿನಿ (studnet) ಬಸ್ ಹತ್ತಿ ಒಳಗೆ ಹೋಗುವ ಮೊದಲೇ ಬಸ್ ಚಲಿಸಲಾರಂಭಿಸುತ್ತದೆ. ಮೊದಲ ಮೆಟ್ಟಿಲು ಮಾತ್ರ ಹತ್ತಿದ್ದ ವಿದ್ಯಾರ್ಥಿನಿ ಆಯತಪ್ಪಿ ಹೊರಗೆ ಬೀಳುತ್ತಾಳೆ ಮತ್ತು ಹಿಂದಿನ ಚಕ್ರ ತನ್ನ ಮೇಲೆ ಹತ್ತುವುದರಿಂದ ಸ್ವಲ್ಪದರಲ್ಲಿ ಪಾರಾಗುತ್ತಾಳೆ.

ವಿದ್ಯಾರ್ಥಿನಿ ಮತ್ತು ಅವಳ ಪಾಲಕರು ಅದೃಷ್ಟವಂತರು ಮಾರಾಯ್ರೇ. ಆದರೆ ನಿರ್ವಾಹಕ ಮತ್ತು ಚಾಲಕ ಇಬ್ಬರೂ ತಪ್ಪಿತಸ್ಥರು. ಬಸ್ಸಿನ ಎರಡೂ ಬಾಗಿಲುಗಳು (ಮುಂದೆ ಮತ್ತು ಹಿಂದಿನದು) ಮುಚ್ಚಿಕೊಂಡ ನಂತರವೇ ಕಂಡಕ್ಟರ್ ರೈಟ್ ಅನ್ನಬೇಕು ಮತ್ತು ಚಾಲಕ ಬಸ್ ಎಂಜಿನ್ ಸ್ಟಾರ್ಟ್ ಮಾಡಬೇಕು.

ಇದನ್ನು ಓದಿ:   Viral Video: ಮಳೆಗಾಲದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ

Follow us on

Click on your DTH Provider to Add TV9 Kannada