ಸುನೀಲ್ ಬೋಸ್ ಸತ್ಕಾರ ಸಮಾರಂಭದಲ್ಲಿ ಮಹಿಳೆಯೊಬ್ಬರು ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು

|

Updated on: Jul 10, 2024 | 5:16 PM

ಸಂಸದನೊಬ್ಬನ ಜವಾಬ್ದಾರಿ ಅರಿಯುವ ಮೊದಲೇ ಸಚಿವ ಹೆಚ್ ಸಿ ಮಹದೇವಪ್ಪರ ಪುತ್ರನೂ ಅಗಿರುವ ಸುನೀಲ್ ಬೋಸ್ ವಿರುದ್ಧ ಚಾಮರಾಜನಗರದಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಲೋಕಸಭೆಗೆ ಆಯ್ಕೆಯಾದ ಬಳಿಕ ಅವರು ಕ್ಷೇತ್ರದ ಕಡೆ ಸುಳಿದಿಲ್ಲವಂತೆ. ಯುವನಾಯಕರ ಸಮಸ್ಯೆಯೇ ಅದು-ಪಾರ್ಟ್ ಟೈಮ್ ರಾಜಕಾರಣ!

ಚಾಮರಾಜನಗರ: ಯಾರೇನೇ ಹೇಳಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಅಭಿಮಾನಿಗಳು ಅಪಾರ. ಅವರ ಹೋದೆಡೆಯೆಲ್ಲ ಮಹಿಳಾ ಕಾರ್ಯಕರ್ತರು, ಅಭಿಮಾನಿಗಳು, ಸಹಾಯ ಯಾಚಿಸುವವರು ಸುತ್ತುವರಿಯುತ್ತಾರೆ. ಸಿದ್ದರಾಮಯ್ಯ ಇವತ್ತು ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸುನೀಲ್ ಬೋಸ್ ಗಾಗಿ ಇಟ್ಟುಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ಆಸೀನರಾಗಿದ್ದ ಸಿದ್ದರಾಮಯ್ಯರಲ್ಲಿಗೆ ಬರುವ ಮಹಿಳೆಯೊಬ್ಬರು ಅವರ ಪಾದಗಳಿಗೆ ನಮಸ್ಕರಿಸುತ್ತಾರೆ. ಅವರಿಗೆ ಮುಖ್ಯಮಂತ್ರಿಯೆಡೆ ಇರುವ ಅಭಿಮಾನ ಮತ್ತು ಭಕ್ತಿಭಾವ ಗಮನಿಸಿ. ಸಿದ್ದರಾಮಯ್ಯ ಬಳಿ ಹೋಗಿ ಅವರ ಪಾದ ಮುಟ್ಟುವ ಮೊದಲು ಅವರು ತಮ್ಮ ಪಾದರಕ್ಷೆಗಳನ್ನು ಕಳಚುತ್ತಾರೆ. ಒಂದು ಕುಟುಂಬದ ಯಜಮಾನನ ಹಾಗೆ ಸಿದ್ದರಾಮಯ್ಯ ಮಹಿಳೆಯ ತಲೆಮೇಲೆ ಕೈಯಿಟ್ಟು ಆಶೀರ್ವದಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮುಡಾ ಹಗರಣದ ತನಿಖೆ ಸಿಬಿಐಗೆ ವಹಿಸಲ್ಲ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ನುಡಿ