ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಮಹಿಳೆ; ಮುಂದೆ ಆಗಿದ್ದೇನು!
ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಆಯತಪ್ಪಿ ಬಿದಿದ್ದು, ಅಲ್ಲೇ ಇದ್ದ ಪೇದೆ ಮಾರುತಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಬಳ್ಳಾರಿ: ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ನಡೆದಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದ್ದು, ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಆಯತಪ್ಪಿ ಬಿದಿದ್ದಾರೆ. ಅಲ್ಲೇ ಇದ್ದ ಪೇದೆ ಮಾರುತಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬಳ್ಳಾರಿಯ ರೈಲ್ವೆ ಪೊಲೀಸ ಪೇದೆ ಮಾರುತಿ ಹೊಸಮನಿ ಮಹಿಳೆಯ ರಕ್ಷಣೆ ಮಾಡಿದ್ದು, ರಕ್ಷಣೆ ಮಾಡಿದ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿವೆ. ಗದಗ ಮೂಲದ ಲಲಿತಾ ಬಳ್ಳಾರಿಯ ಸಹೋದರಿ ಮನೆಗೆ ಭೇಟಿ ನೀಡಿ ಮರಳಿ ಊರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಹೃದಯಾಘಾತದಿಂದ ಸಾವು
ಬುಕಾರೆಸ್ಟ್ ಶಿಬಿರದಲ್ಲಿ ಭಾರತೀಯ ವಿದ್ಯಾರ್ಥಿನಿಯ ಹುಟ್ಟುಹಬ್ಬ ಆಚರಣೆ: ವಿಡಿಯೋ ವೈರಲ್