8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಹೃದಯಾಘಾತದಿಂದ ಸಾವು

ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ಸಂಭವಿಸಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ.

8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಹೃದಯಾಘಾತದಿಂದ ಸಾವು
ಹೃದಯಾಘಾತದಿಂದ ಸಾಪನ್ನಪ್ಪಿರುವ ಟಗರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 01, 2022 | 2:45 PM

ಬಾಗಲಕೋಟೆ: ಹೃದಯಾಘಾತದಿಂದ ಟಗರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. 8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಟಗರು ಹೃದಯಾಘಾತದಿಂದ ಸಾವನ್ನಪ್ಪಿದೆ. ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ,ಕಲಾವಿದ ಹೆಚ್.ಎನ್. ಸೇಬಣ್ಣವರ ಎಂಬುವರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಲವ್ಲಿಬಾಯ್ ಟಗರು ಸೋಲಿಸಿ, ಬೈಕ್, ಹೋರಿ, ಚಿನ್ನ ,ಬೆಳ್ಳಿ ನಗದು ಸೇರಿ ಹತ್ತು ಲಕ್ಷ ರೂ. ಬಹುಮಾನ ಗಳಿಸಿತ್ತು. 8 ಲಕ್ಷಕ್ಕೆ ಕೇಳಿದ್ದರೂ ಮಾಲೀಕ ಮಾರಿರಲಿಲ್ಲ. 6 ವರ್ಷದ ಲವ್ಲಿಬಾಯ್ ದೇಹಕ್ಕೆ ಮಾಲೆ , ಹಣೆಗೆ ಬೆಳ್ಳಿ ಖಡಗ, ದೇಹಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ದಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಟಗರು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಜನರು ಬರುತ್ತಿದ್ದಾರೆ.

ಬಳ್ಳಾರಿ: ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ಸಂಭವಿಸಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದ್ದು, ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಆಯತಪ್ಪಿ ಬಿದಿದ್ದಾರೆ. ಅಲ್ಲೇ ಇದ್ದ ಪೇದೆ ಮಾರುತಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಬಳ್ಳಾರಿಯ ರೈಲ್ವೆ ಪೊಲೀಸ ಪೇದೆ ಮಾರುತಿ ಹೊಸಮನಿಯಿಂದ ಮಹಿಳೆಯ ರಕ್ಷಣೆ ಮಾಡಲಾಗಿದ್ದು, ಮಹಿಳೆಯ ರಕ್ಷಣೆ ಮಾಡಿದ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿವೆ. ಗದಗ ಮೂಲದ ಲಲಿತಾ ಬಳ್ಳಾರಿಯ ಸಹೋದರಿ ಮನೆಗೆ ಭೇಟಿ ನೀಡಿ ಮರಳಿ ಊರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ತುಮಕೂರು: ಮೊಬೈಲ್ ಕಳ್ಳತನ ಮಾಡಿದ ಮೂವರು ಕಳ್ಳರಿಗೆ ಜೈಲು ಹಾಗೂ ದಂಡ ಶಿಕ್ಷೆ ವಿಧಿಸಲಾಗಿದೆ. ತುಮಕೂರಿನ ಎರಡನೇ ಅಧಿಕ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. 2020ರ ಜುಲೈ 6 ರಂದು ತುಮಕೂರು ತಾಲೂಕಿನ ಬೊಮ್ಮನಹಳ್ಳಿ ಬಳಿ ಘಟನೆ ನಡೆದಿತ್ತು. ಅನಂತಕುಮಾರ, ಮನೋಜ್, ಕಾರ್ತಿಕ್ ಮೊಬೈಲ್ ಕಳ್ಳತನ ಮಾಡಿದ್ದರು. ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಪಿಐ ಚನ್ನೇಗೌಡ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಭಿತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದ್ದು, ಮೂರು ವರ್ಷ ಕಠಿಣ ಶಿಕ್ಷೆ ತಲಾ 5 ಸಾವಿರ ದಂಡ ವಿಧಿಸಿಲಾಗಿದೆ. ಸರ್ಕಾರದ ಪರವಾಗಿ ವಿಎ ಕವಿತಾ ವಾದ ಮಂಡಿಸಿದ್ದರು.

ಇದನ್ನೂ ಓದಿ:

Shivaratri Special: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ವೈಭವ

Published On - 1:11 pm, Tue, 1 March 22

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ