AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ

ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ

Jagadisha B
| Edited By: |

Updated on: Jun 27, 2026 | 6:16 PM

Share

ಪ್ರೇಮಿಗಳ (Lovers) ನಡುವೆ ಕಾರಲ್ಲೇ (Car) ಗಲಾಟೆ ನಡೆದು, ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಶಿರಾ (Shira) ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ನಾಗೇಂದ್ರ (30) ಸಜೀವ ದಹನವಾದ ವ್ಯಕ್ತಿ. ನಾಗೇಂದ್ರ ಎನ್ನುವಾತ ಬೆಂಗಳೂರಿಂದ ಅಂಕೋಲಕ್ಕೆ ಹೋಗಲೆಂದು ಕಾರು ಬುಕ್​ ಮಾಡಿದ್ದು, ಜಯನಗರದಲ್ಲಿದ್ದ ಪ್ರೇಯಸಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಆದ್ರೆ, ಅದೇನಾಯ್ತೋ ಏನೋ ಕಾರಿನಲ್ಲೇ ಪ್ರೇಮಿಗಳು ಕಿತ್ತಾಡಿಕೊಂಡಿದ್ದು, ಈ ವೇಳೆ ಚಾಲಕ ಕಾರನ್ನು ಸೈಡಿಗೆ ಹಾಕಿದ್ದು, ಈ ವೇಳೆ ಯುವತಿ ಕಾರಿನಿಂದ ಇಳಿದಿದ್ದಾಳೆ. ಬಳಿಕ ಪ್ರಿಯಕರ ನಾಗೇಂದ್ರ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಇನ್ನೊಂದೆಡೆ ಹೆಂಡತಿಯ ಚಿನ್ನ ಅಡವಿಟ್ಟು ಕಾರು ಖರೀದಿಸಿದ್ದ ಚಾಲಕ ಕಂಗಾಲಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು? ಯುವತಿ ಹಾಗೂ ಚಾಲಕ ಪಾರಾಗಿದ್ಹೇಗೆ? ಎನ್ನುವ ಬಗ್ಗೆ ಕಾರಿನ ಡ್ರೈವರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮುಖ್ಯಾಂಶಗಳು

  • ಪಾಂಗಲ್ ಪ್ರೇಮಿಯಿಂದ ಕಾರ್ ಸ್ಪೋಟಗೊಳಿಸಿಕೊಂಡು ಸಾವು ಪ್ರಕರಣ
  • ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಘಟನೆ
  • ತಾನು ಕಣ್ಣಾರೆ ನೊಡಿದ್ದನ್ನ ಟಿವಿ9ಗೆ ಹೇಳಿಕೊಂಡ ಕಾರು ಚಾಲಕ ಪ್ರವೀಣ್

ತುಮಕೂರು, (ಜೂನ್ 27): ಪ್ರೇಮಿಗಳ (Lovers) ನಡುವೆ ಕಾರಲ್ಲೇ (Car) ಗಲಾಟೆ ನಡೆದು, ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಶಿರಾ (Shira) ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ನಾಗೇಂದ್ರ (30) ಸಜೀವ ದಹನವಾದ ವ್ಯಕ್ತಿ. ನಾಗೇಂದ್ರ ಎನ್ನುವಾತ ಬೆಂಗಳೂರಿಂದ ಅಂಕೋಲಕ್ಕೆ ಹೋಗಲೆಂದು ಕಾರು ಬುಕ್​ ಮಾಡಿದ್ದು, ಜಯನಗರದಲ್ಲಿದ್ದ ಪ್ರೇಯಸಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಆದ್ರೆ, ಅದೇನಾಯ್ತೋ ಏನೋ ಕಾರಿನಲ್ಲೇ ಪ್ರೇಮಿಗಳು ಕಿತ್ತಾಡಿಕೊಂಡಿದ್ದು, ಈ ವೇಳೆ ಚಾಲಕ ಕಾರನ್ನು ಸೈಡಿಗೆ ಹಾಕಿದ್ದು, ಈ ವೇಳೆ ಯುವತಿ ಕಾರಿನಿಂದ ಇಳಿದಿದ್ದಾಳೆ. ಬಳಿಕ ಪ್ರಿಯಕರ ನಾಗೇಂದ್ರ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಇನ್ನೊಂದೆಡೆ ಹೆಂಡತಿಯ ಚಿನ್ನ ಅಡವಿಟ್ಟು ಕಾರು ಖರೀದಿಸಿದ್ದ ಚಾಲಕ ಕಂಗಾಲಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು? ಯುವತಿ ಹಾಗೂ ಚಾಲಕ ಪಾರಾಗಿದ್ಹೇಗೆ? ಎನ್ನುವ ಬಗ್ಗೆ ಕಾರಿನ ಡ್ರೈವರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಉಬರ್ ನಲ್ಲಿ ನನಗೆ ನಾಗೇಂದ್ರ ಎಂಬ ಹೆಸರಿನಲ್ಲಿ ಕಾರ್ ಬುಕ್ ಆಗಿದ್ದು, ಇಂದು (ಜೂನ್ 27) ಬೆಳಿಗ್ಗೆ 11 ಗಂಟೆಗೆ ಜಯನಗರದಲ್ಲಿ ಒಟ್ಟಿಗೆ ಕಾರ್ ಹತ್ತಿದ್ದರು. ಕಳ್ಳಂಬೆಳ್ಳ ವರೆಗೂ ಯಾವುದೇ ಸಮಸ್ಯೆ ಕಂಡಿಲ್ಲ. ಇಲ್ಲಿಗೆ ಬರುವ ಕೊಂಚ ದೂರದಲ್ಲೇ ಪೆಟ್ರೋಲ್ ಹಾಕಿಸಿಕೊಂಡೆ. ಈ ವೇಳೆ ಇಬ್ಬರು ವಾಶ್ ರೂಂಗೆ ಹೊಗಿ ಬಂದರು. ಜೊತೆಗೆ ಆಂಕೊಲದಿಂದ ನನಗೆ ಕರೆ ಬಂದಿದ್ದು, ಇದು ಕಿಡ್ನಾಪ್ ಅಂತ ಪೊಲೀಸರು ಮಾಹಿತಿ ಕೊಟ್ಟಿದ್ದರು. ಆ ನಂತರ ಹೊರಟಾಗ ಇಬ್ಬರ ನಡುವೆ ಗಲಾಟೆ ಆಗಿತ್ತು. ಆತ ಚಾಕುನಿಂದ ಆಕೆಗೆ ಚುಚ್ಚುತಿದ್ದ. ಇದರಿಂದ ನಾನು ಗಾಡಿ ಸೈಡ್​​ಗೆ ಹಾಕಿದೆ.ನಂತರ ಹೊಗುತಿದ್ದ ಬೈಕ್ ಗೆ ಕೈ ಒಡ್ಡಿ ಯುವತಿಯನ್ನು ಹತ್ತಿಸಿದೆ. ಆಗ ಆಕೆ ಹೊರಡುವಾಗ ಕಾರ್ ನಲ್ಲಿ ಬಾಂಬ್ ಇದೆ ಎಂದಳು. ನಂತರ ನಾನು ಕಾರ್ ಹತ್ತಿರ ಹೋದಾಗ ಆಗಲೇ ಒಂದು ಬಾಂಬ್ ಕೈನಲ್ಲಿ ಹಿಡಿದಿದ್ದ. ಅದನ್ನು ನಾನು ಆಚೆಗೆ ಕಿತ್ತು ಎಸೆದೆ. ನಂತರ ಮತ್ತೊಂದು ಅಚ್ಚಿಕೊಳ್ಳುತಿದ್ದ. ಆಗ ನಾನು ಅಲ್ಲಿಂದ ಓಡಿದೆ. ನಂತರ ಕಾರ್ ಬ್ಲಾಸ್ಟ್ ಆಗಿದೆ. ನನ್ನ ಹೆಂಡತಿ ವಡವೆ ಅಡ ಇಟ್ಟು ಕಾರು ಖರೀದಿ ಮಾಡಿದ್ದೆ ಸರ್ ಎಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು?

Follow Us