ಜೆಡಿ(ಎಸ್) ಪಕ್ಷದ ಪಂಚರತ್ನ ಯಾತ್ರೆಯಲ್ಲಿ ಟಿ-ಶರ್ಟ್ ಗಳ ಮೇಳ, ಒಬ್ಬ 3 ಪಡೆದು ಒಂದರ ಮೇಲೊಂದು ಧರಿಸಿದ
ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ತುಮಕೂರು: ಜೆಡಿ(ಎಸ್) ಮುಖಂಡ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ (Pancharatna Yatre) ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪ್ರವೇಶಿಸಿದೆ. ಯಾತ್ರೆಯಲ್ಲಿ ಟಿ ಶರ್ಟ್ (T-shirt) ಮೇಳವೂ ನಡೆಯುತ್ತಿದೆ ಮಾರಾಯ್ರೇ. ವಿಷಯವೇನೆಂದರೆ, ಜೆಡಿ(ಎಸ್) ಪಕ್ಷದ ಚಿಹ್ನೆ ಮತ್ತು ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡರ ಚಿತ್ರಗಳಿರುವ ಟಿ ಶರ್ಟ್ ಗಳನ್ನು ಬೆಂಬಲಿಗರಿಗೆ ಹಂಚಲಾಗುತ್ತಿದೆ. ಉಚಿತ ಶರ್ಟ್ ಗಳಿಗಾಗಿ ಯುವಕರು ಮುಗಿ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos