ಯುವಕನೊಬ್ಬನಿಗೆ ಇಂಟರ್ನೆಟ್ ಮೂಲಕ ಅವಾಚ್ಯ ಪದಗಳಿಂದ ನಿಂದಿಸಿರುವ ಕರೆ ಬಂದಿರೋದು ನಿಜ: ಮಂಗಳೂರು ಪೊಲೀಸ್ ಕಮೀಶನರ್

ಅವರು ಹೇಳಿದ್ದನ್ನು ಪರಿಶೀಲಿಸಿದಾಗ ಅದು ಫುಡ್ ಡೆಲಿವರಿ ಬಾಯ್ ಆಗಿದ್ದು ಅವನು ದೂರುದಾರ ಮನೆ ಪಕ್ಕ ಆಹಾರದ ಪೊಟ್ಟಣ ಡೆಲಿವರಿ ಮಾಡಲು ಹೋಗಿದ್ದಾನೆ, ಅಷ್ಟೇ, ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

TV9kannada Web Team

| Edited By: Arun Belly

Aug 09, 2022 | 3:22 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿರುವ ಎಲ್ಲ ಮೇಸೇಜುಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅವುಗಳ ನಿಖರತೆಯನ್ನು ಪತ್ತೆಮಾಡಲಾಗುತ್ತಿದೆ. ಕೆಲವರು ಸುಳ್ಳುಸುದ್ದಿಗಳನ್ನು ಹರಿಬಿಡುತ್ತಿದ್ದಾರೆ, ಸಾರ್ವಜನಿಕರು ಯಾವುದಕ್ಕೂ ಪ್ರತಿಕ್ರಿಯಿಸಬಾರದೆಂದು ಮಂಗಳೂರು (Mangaluru) ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ (N Shashikumar) ಹೇಳಿದ್ದಾರೆ. ಆದರೆ 28 ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನಿಗೆ ಇಂಟರ್ನೆಟ್ ಮೂಲಕ ಕರೆ ಬಂದಿರುವುದು ನಿಜ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ, ಅದರೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದನ್ನು ಪರಿಶೀಲಿಸಿದಾಗ ಅದು ಫುಡ್ ಡೆಲಿವರಿ ಬಾಯ್ (Food Delivery Boy) ಆಗಿದ್ದು ಅವನು ದೂರುದಾರ ಮನೆ ಪಕ್ಕ ಆಹಾರದ ಪೊಟ್ಟಣ ಡೆಲಿವರಿ ಮಾಡಲು ಹೋಗಿದ್ದಾನೆ, ಅಷ್ಟೇ, ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Follow us on

Click on your DTH Provider to Add TV9 Kannada