ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ

ಇಂದು(ಶನಿವಾರ) ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಶಾಂತಿಯುತವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದ್ಧೂರಿಯಾಗಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸಚಿವ, ಬಿಜೆಪಿ ಶಾಸಕ, ಪಾಲಿಕೆ ಸದಸ್ಯರುಗಳು, ಹಿಂದೂಪರ ಸಂಘಟನೆಗಳ ಮುಖಂಡರ ಕುಣಿದು ಕುಪ್ಪಳಿಸಿ ಗಜಾನನನ್ನು ಸ್ವಾಗತಿಸಿದ್ದಾರೆ. ಅದರಂತೆ ಇದೀಗ ಈದ್ಗಾ ಗಣಪನಿಗೆ ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಆರತಿ ಮಾಡಲಾಗಿದೆ.

ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
|

Updated on: Sep 07, 2024 | 10:03 PM

ಇಂದು(ಶನಿವಾರ) ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಶಾಂತಿಯುತವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದ್ಧೂರಿಯಾಗಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸಚಿವ, ಬಿಜೆಪಿ ಶಾಸಕ, ಪಾಲಿಕೆ ಸದಸ್ಯರುಗಳು, ಹಿಂದೂಪರ ಸಂಘಟನೆಗಳ ಮುಖಂಡರ ಕುಣಿದು ಕುಪ್ಪಳಿಸಿ ಗಜಾನನನ್ನು ಸ್ವಾಗತಿಸಿದ್ದಾರೆ. ಅದರಂತೆ ಇದೀಗ ಈದ್ಗಾ ಗಣಪನಿಗೆ ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಆರತಿ ಮಾಡಲಾಗಿದೆ. ಸುತ್ತ ಬೆಂಕಿ ಪಂಜನ್ನು ಹಿಡಿದು ನಾಲ್ಕು ಅರ್ಚಕರಿಂದ ನಾಲ್ಕು ದಿಕ್ಕಿಗೆ ಮುಖ ಮಾಡಿ ಈದ್ಗಾ ಗಣೇಶನಿಗೆ ಆರತಿ ಹಾಗೂ ಮೂರು ಕಡೆಗಳಿಂದ ಹೋಮ ಕುಂಡಕ್ಕೆ ಆರತಿ ಮಾಡಲಾಯಿತು.  ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಆಗಮಿಸಿದ್ದು, ಪೂಜೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಕೂಡ ಭಾಗಿಯಾದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us