IND vs BAN: 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್; ವಿಡಿಯೋ ನೋಡಿ
Abhishek Sharma's Blazing Asia Cup Half-Century: ಏಷ್ಯಾಕಪ್ 2025 ರಲ್ಲಿ ಭಾರತ ತಂಡದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಬಾಂಗ್ಲಾದೇಶದ ವಿರುದ್ಧ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 25 ಎಸೆತಗಳಲ್ಲಿ ಅವರು ತಮ್ಮ ಎರಡನೇ ಅರ್ಧಶತಕವನ್ನು ಗಳಿಸಿದರು. ಆರಂಭದಲ್ಲಿ ನಿಧಾನವಾಗಿದ್ದ ಅಭಿಷೇಕ್ ನಂತರ ಅದ್ಭುತ ಬ್ಯಾಟಿಂಗ್ ಮಾಡಿ ನಾಲ್ಕನೇ ಟಿ20 ಅರ್ಧಶತಕ ಪೂರೈಸಿದರು.
2025 ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಅಭಿಷೇಕ್ ಕೇವಲ 25 ಎಸೆತಗಳಲ್ಲಿ ಟೂರ್ನಿಯ ಸತತ ಎರಡನೇ ಅರ್ಧಶತಕವನ್ನು ಬಾರಿಸಿದರು. ಆರಂಭದಲ್ಲಿ ರನ್ ಗಳಿಸಲು ಕೊಂಚ ಕಷ್ಟಪಟ್ಟ ಅಭಿಷೇಕ್ ಆ ಬಳಿಕ ರನ್ಗಳ ಮಳೆ ಹರಿಸಿದರು. ಮಾತ್ರವಲ್ಲದೆ ಆರಂಭಿಕ ಶುಭ್ಮನ್ ಗಿಲ್ ಅವರೊಂದಿಗೆ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು.
ವಾಸ್ತವವಾಗಿ ಅಭಿಷೇಕ್ ಇನ್ನಿಂಗ್ಸ್ನ ಆರಂಭದಲ್ಲೇ ವಿಕೆಟ್ ಕೈಚೆಲ್ಲಬೇಕಿತ್ತು. ಅಭಿಷೇಕ್ಗೆ ಜೀವದಾನ ಸಿಕ್ಕಿದಾಗ 8 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ್ದರು. ಆದರೆ ಇದರ ಲಾಭ ಪಡೆದ ಅಭಿಷೇಕ್ ಬಾಂಗ್ಲಾದೇಶದ ಬೌಲರ್‌ಗಳನ್ನು ಚಚ್ಚಿ ಹಾಕಿದರು. ಮುಂದಿನ 11 ಎಸೆತಗಳಲ್ಲಿ ಅವರು ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿ 39 ರನ್ ಗಳಿಸಿದರು. ಶೀಘ್ರದಲ್ಲೇ, ಅಭಿಷೇಕ್ ಕೇವಲ 25 ಎಸೆತಗಳಲ್ಲಿ ತಮ್ಮ ನಾಲ್ಕನೇ ಟಿ20 ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಏಷ್ಯಾಕಪ್‌ನಲ್ಲಿ ಇದು ಅವರ ಸತತ ಎರಡನೇ ಅರ್ಧಶತಕವಾಗಿತ್ತು. ಇದಕ್ಕೂ ಮೊದಲು, ಅವರು ಪಾಕಿಸ್ತಾನ ವಿರುದ್ಧ ಕೇವಲ 39 ಎಸೆತಗಳಲ್ಲಿ 74 ರನ್ ಗಳಿಸಿದ್ದರು.

