AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಮೇರು ಸಾಹಿತಿ ಭೈರಪ್ಪನವರು ಹುಬ್ಬಳ್ಳಿ ಹೋಟೆಲ್​ ನಲ್ಲಿ ಮಾಣಿಯಾಗಿದ್ರು

ಕನ್ನಡದ ಮೇರು ಸಾಹಿತಿ ಭೈರಪ್ಪನವರು ಹುಬ್ಬಳ್ಳಿ ಹೋಟೆಲ್​ ನಲ್ಲಿ ಮಾಣಿಯಾಗಿದ್ರು

TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Sep 24, 2025 | 8:15 PM

Share

ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿ, ಪದ್ಮಭೂಷಣ ಡಾ. ಎಸ್ಎಲ್ ಭೈರಪ್ಪನವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ. ನಾನಾ ಗಣ್ಯರು, ಹಿರಿಯ ಸಾಹಿತಿಗಳು ಭೈರಪ್ಪನವರೊಂದಿಗಿನ ಒಡನಾಟವನ್ನು ಹಂಚಿಕೊಂಡು ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದ ಓದುಗ ಅಭಿಮಾನಿಗಳು ಸಹ ತಮ್ಮದೇ ರೀತಿಯಲ್ಲಿ ಕಂಬನಿ ಮಿಡಿಯುವ ಮಟ್ಟಕ್ಕೆ ಭೈರಪ್ಪನವರು ಬೆಳೆದಿದ್ದರು. ಇನ್ನು ರಾಷ್ಟ್ರಮಟ್ಟದವರೆಗೂ ಹೆಸರು ಮಾಡುವ ಮೊದಲು ಅವರು ಹುಬ್ಬಳ್ಳಿಯ ಹೋಟೆಲ್ ವೊಂದರಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು ಎನ್ನುವುದನ್ನು ನಂಬುತ್ತೀರಾ? ಅಚ್ಚರಿ ಅನ್ನಿಸಿದರೂ ಸತ್ಯ. ಭೈರಪ್ಪನವರು ಹೋಟೆಲ್​ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು. ಈ ಬಗ್ಗೆ ಧಾರವಾಡದ ಹಿರಿಯ ಕವಿ, ನಾಟಕಕಾರ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬಿಚ್ಚಿಟ್ಟಿದ್ದಾರೆ.

ಧಾರವಾಡ, (ಸೆಪ್ಟೆಂಬರ್ 24): ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿ, ಪದ್ಮಭೂಷಣ ಡಾ. ಎಸ್ಎಲ್ ಭೈರಪ್ಪನವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ. ನಾನಾ ಗಣ್ಯರು, ಹಿರಿಯ ಸಾಹಿತಿಗಳು ಭೈರಪ್ಪನವರೊಂದಿಗಿನ ಒಡನಾಟವನ್ನು ಹಂಚಿಕೊಂಡು ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದ ಓದುಗ ಅಭಿಮಾನಿಗಳು ಸಹ ತಮ್ಮದೇ ರೀತಿಯಲ್ಲಿ ಕಂಬನಿ ಮಿಡಿಯುವ ಮಟ್ಟಕ್ಕೆ ಭೈರಪ್ಪನವರು ಬೆಳೆದಿದ್ದರು. ಇನ್ನು ರಾಷ್ಟ್ರಮಟ್ಟದವರೆಗೂ ಹೆಸರು ಮಾಡುವ ಮೊದಲು ಅವರು ಹುಬ್ಬಳ್ಳಿಯ ಹೋಟೆಲ್ ವೊಂದರಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು ಎನ್ನುವುದನ್ನು ನಂಬುತ್ತೀರಾ? ಅಚ್ಚರಿ ಅನ್ನಿಸಿದರೂ ಸತ್ಯ. ಭೈರಪ್ಪನವರು ಹೋಟೆಲ್​ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು. ಈ ಬಗ್ಗೆ ಧಾರವಾಡದ ಹಿರಿಯ ಕವಿ, ನಾಟಕಕಾರ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬಿಚ್ಚಿಟ್ಟಿದ್ದಾರೆ.

ಟಿವಿ9 ಜತೆ ಮಾತನಾಡಿರುವ ಸಿದ್ದಲಿಂಗ ಪಟ್ಟಣಶೆಟ್ಟಿ, ಭೈರಪ್ಪನವರ ಸಾವು ನನಗೆ ನೋವು ತಂದಿದೆ. ಅವರು ಹುಬ್ಬಳ್ಳಿಯ ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಶ್ರೀಮಂತಿಕೆಯಲ್ಲಿ ಬೆಳೆದರು. ಕೊನೆಗೆ ಮೈಸೂರಿನಲ್ಕಿ ಪ್ರಾಧ್ಯಾಪಕರಾಗಿದ್ದರು. ಕಾದಂಬರಿಕಾರರಾಗಿ ಪ್ರಸಿದ್ಧಿ ಪಡೆದಿದ್ದರು. ಧಾರವಾಡ ಜಿಲ್ಲೆಗೆ ಮಲ್ಲಿಕಾರ್ಜುನ ಮನ್ಸೂರು, ಗಂಗೂಬಾಯಿ ಬಳಿ ಸಂಗೀತ ಕೇಳಲು ಬರುತ್ತಿದ್ದರು ಎಂದು ತಿಳಿಸಿದರು.