ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ: ಇಲ್ಲಿದೆ ವಿಡಿಯೋ
Abhishek Sharma - Digvesh Rathi: ಇಂಡಿಯನ್ ಪ್ರೀಮಿಯರ್ ಲೀಗ್ನ 61ನೇ ಪಂದ್ಯವು ಯುವ ಆಟಗಾರರಿಬ್ಬರ ಜಗಳಕ್ಕೆ ಸಾಕ್ಷಿಯಾಗಿದೆ. ಲಕ್ನೋನ ಏಕಾನ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ಬಳಿಕ ಎಲ್ಎಸ್ಜಿ ಸ್ಪಿನ್ನರ್ ದಿಗ್ವೇಶ್ ರಾಥಿ, ನಿನ್ನಿಂದ ಆಗಲ್ಲ… ಹೋಯ್ತಾ ಇರು ಎಂದು ಕೈ ಸನ್ನೆ ಮಾಡಿದ್ದರು.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 61ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು. ಅಭಿಷೇಕ್ ಶರ್ಮಾ ಔಟಾದ ಬಳಿಕ ಹೋಯ್ತಾ ಇರು ಎಂಬಾರ್ಥದಲ್ಲಿ ದಿಗ್ವೇಶ್ ಸಂಭ್ರಮಿಸಿದ್ದರು.
ಇದರಿಂದ ಕೋಪಗೊಂಡ ಅಭಿಷೇಕ್ ಶರ್ಮಾ ದಿಗ್ವೇಶ್ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಇಬ್ಬರ ನಡುವಣ ಮಾತಿನ ಚಕಮಕಿ ತಾರಕ್ಕೇರುತ್ತಿದ್ದಂತೆ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೆ ಪೆವಿಲಿಯನ್ ಕಡೆ ಹೆಜ್ಜೆ ಹಾಕುವಾಗ ಅಭಿಷೇಕ್ ಶರ್ಮಾ ನಿನ್ನ ಜುಟ್ಟು ಹಿಡಿದು ಹೊಡಿತೀನಿ ಎಂದು ದಿಗ್ವೇಶ್ಗೆ ವಾರ್ನಿಂಗ್ ಮಾಡಿದ್ದರು.
ಇದಾಗ್ಯೂ ಇಬ್ಬರು ಆಟಗಾರರು ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ್ದಾರೆ. ಆದರೆ ಈ ವೇಳೆಯೂ ವಾಗ್ಯುದ್ದ ಮುಂದುವರೆಸಿದ್ದರು ಎಂಬುದು ವಿಶೇಷ. ಪಂದ್ಯದ ನಡೆದ ಹಸ್ತಲಾಘವ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ವಿಜಯ್ ದಹಿಯಾ ಅವರು ಅಭಿಷೇಕ್ ಜೊತೆ ಘಟನೆ ಬಗ್ಗೆ ಚರ್ಚಿಸಿದ್ದರು.
ಈ ವೇಳೆ ದಿಗ್ವೇಶ್ ಕೂಡ ಅಲ್ಲೇ ಲೈನ್ನಲ್ಲಿದ್ದರು. ಇದಾದ ಬಳಿಕ ಅಭಿಷೇಕ್ ಹಾಗೂ ದಿಗ್ವೇಶ್ ಪರಸ್ಪರ ಹಸ್ತಲಾಘವ ಮಾಡಿದ್ದಾರೆ. ಅದು ಕೂಡ ಮಾತಿನ ಚಕಮಕಿಯೊಂದಿಗೆ. ಈ ವೇಳೆ ತೆರಳುವಂತೆ ವಿಜಯ್ ದಹಿಯಾ ಅಭಿಷೇಕ್ಗೆ ಸೂಚನೆ ನೀಡಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 205 ರನ್ ಕಲೆಹಾಕಿದರೆ, ಈ ಗುರಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು 18.2 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.