ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಯಲ್ಲಿ ಎಷ್ಟು ಬತ್ತಿಗಳನ್ನು ಬಳಸಬೇಕು ಎಂಬುದರ ಕುರಿತು ಡಾ. ಬಸವರಾಜ್ ಗುರೂಜಿ ಅವರು ಮಾಹಿತಿ ನೀಡಿದ್ದಾರೆ. ಒಂದು ಬತ್ತಿ ಅಶುಭ, ಎರಡು ಬತ್ತಿಗಳು ಕುಟುಂಬದ ಸೌಖ್ಯಕ್ಕೆ, ಮೂರು ಬತ್ತಿಗಳು ಗರ್ಭಿಣಿಯರಿಗೆ ಶುಭ, ನಾಲ್ಕು ಬತ್ತಿಗಳು ಅಶುಭ, ಮತ್ತು ಐದು ಬತ್ತಿಗಳು (ಪಂಚಾರತಿ) ಧನ, ಧಾನ್ಯ, ಆರೋಗ್ಯಕ್ಕೆ ಶುಭ ಎಂದು ವಿವರಿಸಲಾಗಿದೆ.
ದೀಪದ ಆರಾಧನೆ ಎಂಬುದು ಹಿಂದೂ ಧರ್ಮದಲ್ಲಿ ಪ್ರಮುಖವಾದ ವಿಷಯ. ಪ್ರತಿನಿತ್ಯದ ಪೂಜೆಯಿಂದ ಹಿಡಿದು ವಿಶೇಷ ಸಂದರ್ಭಗಳವರೆಗೆ ದೀಪದ ಬಳಕೆ ಇದ್ದೇ ಇರುತ್ತದೆ. ಆದರೆ, ದೀಪದಲ್ಲಿ ಎಷ್ಟು ಬತ್ತಿಗಳನ್ನು ಬಳಸಬೇಕು ಎಂಬ ಪ್ರಶ್ನೆ ಅನೇಕರಲ್ಲಿದೆ ಎಂದಿರುವ ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ, ಈ ಸಂಶಯದ ಬಗ್ಗೆ ‘ಟಿವಿ9’ ಕನ್ನಡದ “ನಿತ್ಯ ಭಕ್ತಿ” ಕಾರ್ಯಕ್ರಮದಲ್ಲಿ ವಿವರಣೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.
Latest Videos