ಹೈವೇಯಲ್ಲಿ ಸಿನಿಮೀಯ ದರೋಡೆ; ಅಕೌಂಟೆಂಟ್ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ 85 ಲಕ್ಷ ರೂ. ಸಾಗಿಸುತ್ತಿದ್ದ ಅಕೌಂಟೆಂಟ್ನನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವಾಹನದಿಂದ ಕೆಳಗಿಳಿಸಿ ದರೋಡೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಪ್ರತಿ ಆರೋಪಿಯನ್ನು ಹಿಡಿದುಕೊಟ್ಟವರಿಗೂ 50,000 ರೂ. ಬಹುಮಾನ ಘೋಷಿಸಿದ್ದಾರೆ. ನೋಯ್ಡಾ ಮೂಲದ ಉದ್ಯಮಿಯೊಬ್ಬರಿಗೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣವನ್ನು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ಬಗ್ಗೆ ತಿಳಿದ ದರೋಡೆಕೋರರು ಆತನಿಗೆ ಅಡ್ಡಹಾಕಿ ದುಡ್ಡು ಕಸಿದುಕೊಂಡಿದ್ದಾರೆ.
ನವದೆಹಲಿ, ಡಿಸೆಂಬರ್ 26: ದೆಹಲಿ- ಲಕ್ನೋ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಅಕೌಂಟೆಂಟ್ ಬಳಿ ಇದ್ದ 85 ಲಕ್ಷ ರೂ. ಹಣವನ್ನು ಬೈಕ್ ಸವಾರರು ದೋಚಿದ್ದಾರೆ. ಈ ಸಿನಿಮೀಯ ದರೋಡೆ (Robbery) ಹೈವೇಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಕೋರರು ಆತನ ಬಳಿ ಇದ್ದ ದುಡ್ಡಿನ ಚೀಲವನ್ನು ಕಸಿದುಕೊಂಡಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆ ಆರಂಭಿಸಲಾಗಿದೆ. ನೋಯ್ಡಾ ಮೂಲದ ಉದ್ಯಮಿಯೊಬ್ಬರಿಗೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣವನ್ನು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ಬಗ್ಗೆ ತಿಳಿದ ದರೋಡೆಕೋರರು ಆತನಿಗೆ ಅಡ್ಡಹಾಕಿ ದುಡ್ಡು ಕಸಿದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

