ರಾಷ್ಟ್ರಧ್ವಜದ ವಿರುದ್ಧ ಯಾರೂ ನಿಲುವು ತಳೆಯುವ ದುಸ್ಸಾಹಸಕ್ಕೆ ಕುಮಾರಸ್ವಾಮಿ ಕೈ ಹಾಕಿದ್ದಾರೆ: ಎನ್ ಚಲುವರಾಯಸ್ವಾಮಿ
ಕುಮಾರಸ್ವಾಮಿಯವರು ನಿನ್ನೆ ಬಿಜೆಪಿ ನಾಯಕರೊಂದಿಗೆ ಸೇರಿ ತಿರಂಗದ ವಿರುದ್ಧ ನಿಲುವು ತಳೆದು ಮಂಡ್ಯದ ಅಮಾಯಕ ಯುವಕರನ್ನು ದಿಕ್ಕುತಪ್ಪಿಸುವ, ಅವರ ನೆಮ್ಮದಿ ಹಾಳುಮಾಡುವ ಪ್ರಯತ್ನ ಮಾಡಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ಇದು ಶೋಭೆ ನೀಡಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದರು
ಮಂಡ್ಯ: ಮಂಡ್ಯದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy), ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಧೋರಣೆಗಳನ್ನು ಕಟುವಾಗಿ ಟೀಕಿಸಿದರು. ರಾಷ್ಟ್ರಧ್ವಜ (National Flag) ಹಾರಿಸಿದ್ದು ತಪ್ಪು ಅಂತ ಅವರು ಬಿಜೆಪಿ ನಾಯಕರ ಜೊತೆ ಸೇರಿ ಹೋರಾಟ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಒಂದು ಗ್ರಾಮದಲ್ಲಿ ಒಬ್ಬೇಒಬ್ಬ ವ್ಯಕ್ತಿ ರಾಷ್ಟ್ರಧ್ವಜ ವಿರುದ್ಧ ಇದುವರೆಗೆ ಮಾತಾಡಿರಲಿಲ್ಲ. ಆದರೆ, ಕೆರೆಗೋಡು ಹನುಮ ಬಾವುಟ ತೆರವುಗೊಳಿಸಿದ ಪ್ರಕರಣದಲ್ಲಿ ಕುಮಾರಸ್ವಾಮಿಯವರು ನಿನ್ನೆ ಬಿಜೆಪಿ ನಾಯಕರೊಂದಿಗೆ ಸೇರಿ ತಿರಂಗದ ವಿರುದ್ಧ ನಿಲುವು ತಳೆದು ಮಂಡ್ಯದ ಅಮಾಯಕ ಯುವಕರನ್ನು ದಿಕ್ಕುತಪ್ಪಿಸುವ, ಅವರ ನೆಮ್ಮದಿ ಹಾಳುಮಾಡುವ ಪ್ರಯತ್ನ ಮಾಡಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ಇದು ಶೋಭೆ ನೀಡಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದರು. ಅವರು ಎರಡೂ ಸಲ ಮುಖ್ಯಮಂತ್ರಿ ಆಗುವಲ್ಲಿ ಮಂಡ್ಯದ ಪಾತ್ರ ಬಹಳ ದೊಡ್ಡದು, ಅವರು ತಮ್ಮ ಅಂತರಾತ್ಮವನ್ನು ಕೇಳಿಕೊಳ್ಳಲಿ, ಇಲ್ಲ ಅಂತ ಅವರು ಹೇಳುವುದಾದರೆ ಅದನ್ನು ತಮ್ಮ ಎದೆ ಮುಟ್ಟಿಕೊಂಡು ಹೇಳಲಿ ಎಂದು ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ