ಅಭಿಮಾನಿಗಳಿಗೆ ದರ್ಶನ್ ಮೇಲಿರೋ ಪ್ರೀತಿ ಎಂಥದ್ದು? ಈ ವಿಡಿಯೋನೇ ಸಾಕ್ಷಿ

Updated on: Feb 16, 2024 | 9:25 AM

ಬರ್ತ್​ಡೇಗೆ ತರುವ ಕೇಕ್​ಗಳು ಪೂರ್ತಿಯಾಗಿ ತಿನ್ನಲಾಗದೆ ಹಾಳಾಗಿ ಹೋಗುತ್ತವೆ. ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ದರ್ಶನ್ ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಫ್ಯಾನ್ಸ್ ಸ್ವೀಕರಿಸಿದ್ದಾರೆ. ಅಕ್ಕಿ ಹಾಗೂ ಇತರ ಧಾನ್ಯ ಹೊತ್ತು ತಂದಿದ್ದಾರೆ.

ನಟ ದರ್ಶನ್ (Darshan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಆರಾಧಿಸುತ್ತಾರೆ. ದರ್ಶನ್ ಹೇಳಿದ್ದನ್ನು ಅಕ್ಷರಶಃ ಪಾಲಿಸೋರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಅವರ ಬರ್ತ್​ಡೇನೆ ಸಾಕ್ಷಿ. ಸಾಮಾನ್ಯವಾಗಿ ಹುಟ್ಟುಹಬ್ಬ ಎಂದಾಗ ಅಭಿಮಾನಿಗಳು ಕೇಕ್ ಹಿಡಿದು ಬರುತ್ತಾರೆ. ಆದರೆ, ಈ ರೀತಿ ತರುವ ಕೇಕ್​ಗಳು ಪೂರ್ತಿಯಾಗಿ ತಿನ್ನಲಾಗದೆ ಹಾಳಾಗಿ ಹೋಗುತ್ತವೆ. ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ದರ್ಶನ್ ಅವರು ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಫ್ಯಾನ್ಸ್ ಸ್ವೀಕರಿಸಿದ್ದಾರೆ. ಬರ್ತ್​ಡೇ ದಿನ ಅಕ್ಕಿ ಮೂಟೆಗಳನ್ನು ಹೊತ್ತು ಬಂದಿದ್ದಾರೆ ಫ್ಯಾನ್ಸ್. ಇವುಗಳನ್ನು ಅಗತ್ಯ ಇರುವವರಿಗೆ ನೀಡಲಾಗುತ್ತದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More