Darshan: ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ನೆರವಾದ ದರ್ಶನ್

Updated on: May 23, 2024 | 10:59 AM

ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ಅರ್ಜುನನ ಸ್ಮಾರಕ‌ ನಿರ್ಮಾಣಕ್ಕೆ ದರ್ಶನ್ ನೆರವು ನೀಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಬೇಕಾದಷ್ಟು ಸ್ಲ್ಯಾಬ್ ಕಲ್ಲುಗಳನ್ನು ಅವರು ಕಳುಹಿಸಿದ್ದಾರೆ. ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೆ ಪ್ರಾಣಿಗಳ ಬಗ್ಗೆ ಇರೋ ಪ್ರಿತಿ ತುಂಬಾನೇ ವಿಶೇಷವಾದುದ್ದು. ಅವರು ಈಗಾಗಲೇ ಮೈಸೂರಿನ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ಅರ್ಜುನನ ಸ್ಮಾರಕ‌ ನಿರ್ಮಾಣಕ್ಕೆ ದರ್ಶನ್ ನೆರವು ನೀಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಬೇಕಾದಷ್ಟು ಸ್ಲ್ಯಾಬ್ ಕಲ್ಲುಗಳನ್ನು ಅವರು ಕಳುಹಿಸಿದ್ದಾರೆ. ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿವೆ. ಅರ್ಜುನ ಮೃತಪಟ್ಟ ವೇಳೆ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡುವುದಾಗಿ ಡಿ ಬಾಸ್ ಮಾತು ಕೊಟ್ಟಿದ್ದರು. ಈ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಕಲ್ಲನ್ನು ಸಮಾಧಿ ಸ್ಥಳಕ್ಕೆ ಪ್ರಯಾಸದಿಂದ ಸಾಗಿಸಿರೋ ಬಗ್ಗೆ ವೀಡಿಯೋ ಮಾಡಿ ಆಪ್ತರು ಶೇರ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us