ಫೈವ್ ಸ್ಟಾರ್ ಹೋಟೆಲ್ ಬಿಟ್ಟು ರಸ್ತೆ ಬದಿ ಡಾಬಾದಲ್ಲಿ ಊಟ ಮಾಡಿದ ನಟ ಅಲ್ಲು ಅರ್ಜುನ್​

ತಗಡು ಶೀಟ್​ನ ಚಾವಣಿ ಇರುವ ಡಾಬಾದಲ್ಲಿ ಅಲ್ಲು ಅರ್ಜುನ್​ ಅವರು ಊಟ ಮಾಡಿದ್ದಾರೆ. ಅವರ ಜೊತೆ ಪತ್ನಿ ಸ್ನೇಹಾ ರೆಡ್ಡಿ ಕೂಡ ಸಾಥ್​ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಫೋಟೋವನ್ನು ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಟಾಲಿವುಡ್​ ನಟನ ಸರಳತೆ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೈವ್ ಸ್ಟಾರ್ ಹೋಟೆಲ್ ಬಿಟ್ಟು ರಸ್ತೆ ಬದಿ ಡಾಬಾದಲ್ಲಿ ಊಟ ಮಾಡಿದ ನಟ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​, ಸ್ನೇಹಾ ರೆಡ್ಡಿ
Follow us
ಮದನ್​ ಕುಮಾರ್​
|

Updated on: May 21, 2024 | 5:42 PM

ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ನಟ ಅಲ್ಲು ಅರ್ಜುನ್ (Allu Arjun)​ ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಅದರ ನಡುವೆಯೂ ಅವರು ಕೆಲವೊಮ್ಮೆ ಸಿಂಪಲ್​ ಆಗಿ ನಡೆದುಕೊಳ್ಳುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಒಂದು ಫೋಟೋ ವೈರಲ್​ ಆಗಿದೆ. ಅಲ್ಲು ಅರ್ಜುನ್​ ಹಾಗೂ ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ (Sneha Reddy) ಅವರು ರಸ್ತೆ ಬದಿಯ ಡಾಬಾದಲ್ಲಿ ಊಟ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋವನ್ನು (Allu Arjun Viral Photo) ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಟಾರ್​ ನಟನ ಸರಳತೆಯನ್ನು ಕಂಡು ಅಭಿಮಾನಿಗಳು ಹೊಗಳುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಲ್ಲು ಅರ್ಜುನ್​ ಅವರು ಫೇಮಸ್​ ಆಗಿದ್ದಾರೆ. ‘ಪುಷ್ಪ 2’ ಸಿನಿಮಾದ ಬಿಡುಗಡೆಗಾಗಿ ಅವರು ಕಾದಿದ್ದಾರೆ. ಈ ನಡುವೆ ಅವರು ಕುಟುಂಬದ ಜೊತೆಗೆ ಕಾಲ ಕಳೆಯುವುದನ್ನು ತಪ್ಪಿಸುವುದಿಲ್ಲ. ಪತ್ನಿ ಸ್ನೇಹಾ ರೆಡ್ಡಿ ಜೊತೆ ಪ್ರಯಾಣ ಮಾಡುವಾಗ ಅಲ್ಲು ಅರ್ಜುನ್​ ಅವರು ರಸ್ತೆಯ ಬದಿಯ ಡಾಬಾದಲ್ಲಿ ಊಟ ಮಾಡಿದ ಫೋಟೋ ವೈರಲ್ ಆಗುತ್ತಿದೆ.

ಡಾಬಾದಲ್ಲಿ ಬಾಕಿ ಗ್ರಾಹಕರು ಕಾಣಿಸಿಲ್ಲ. ಅಲ್ಲು ಅರ್ಜುನ್​ ಮತ್ತು ಸ್ನೇಹಾ ರೆಡ್ಡಿ ಅವರು ಊಟ ಮಾಡುತ್ತಿರುವ ಫೋಟೋವನ್ನು ಅಭಿಮಾನಿಗಳು ಯಾರೋ ದೂರದಿಂದ ಕ್ಲಿಕ್ಕಿಸಿದ್ದಾರೆ. ಫೋನ್​ನಲ್ಲಿ ಮಾತನಾಡುತ್ತಾ ಅಲ್ಲು ಅರ್ಜುನ್​ ಅವರು ಊಟ ಮಾಡುತ್ತಿದ್ದಾರೆ. ತಗಡು ಶೀಟ್​ನ ಚಾವಣಿ ಇರುವ ಡಾಬಾದಲ್ಲಿ ಅಲ್ಲು ಅರ್ಜುನ್​ ಅವರು ಪತ್ನಿ ಜೊತೆ ಬಂದು ಊಟ ಮಾಡಿದ್ದನ್ನು ನೋಡಿ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಆಗಿದೆ.

ಇದನ್ನೂ ಓದಿ: ‘ನಾನು ಸುಂದರವಾಗಿರಲಿಲ್ಲ, ಹಾಗಾಗಿ ಒಳ್ಳೇ ಆಫರ್​ ಬರಲಿಲ್ಲ’: ಅಲ್ಲು ಅರ್ಜುನ್​

ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಕುಮಾರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಪುಷ್ಪ 2’ ತೆರೆಕಂಡ ಬಳಿಕ ಅಲ್ಲು ಅರ್ಜುನ್​ ಅವರ ಚಾರ್ಮ್​ ಇನ್ನಷ್ಟು ಹೆಚ್ಚಾಗಲಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.