‘ನಾನು ಸುಂದರವಾಗಿರಲಿಲ್ಲ, ಹಾಗಾಗಿ ಒಳ್ಳೇ ಆಫರ್​ ಬರಲಿಲ್ಲ’: ಅಲ್ಲು ಅರ್ಜುನ್​

ನಟ ಅಲ್ಲು ಅರ್ಜುನ್​ ಅವರು ಸ್ಟಾರ್​ ಕುಟುಂಬದಿಂದ ಬಂದವರು. ಹಾಗಿದ್ದರೂ ಕೂಡ ಅವರಿಗೆ ಆರಂಭದ ದಿನಗಳು ಚಾಲೆಂಜಿಂಗ್​ ಆಗಿದ್ದವು. ಮೊದಲ ಸಿನಿಮಾ ಗೆದ್ದರೂ ಕೂಡ ಅಲ್ಲು ಅರ್ಜುನ್​ಗೆ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ. ಅದಕ್ಕೆ ತಮ್ಮ ಲುಕ್​ ಕಾರಣ ಎಂದು ಈಗ ಅಲ್ಲು ಅರ್ಜುನ್​ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರ..

‘ನಾನು ಸುಂದರವಾಗಿರಲಿಲ್ಲ, ಹಾಗಾಗಿ ಒಳ್ಳೇ ಆಫರ್​ ಬರಲಿಲ್ಲ’: ಅಲ್ಲು ಅರ್ಜುನ್​
ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: May 08, 2024 | 5:26 PM

ಟಾಲಿವುಡ್​ ನಟ ಅಲ್ಲು ಅರ್ಜುನ್​ (Allu Arjun) ಅವರು ಇಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಶೈನ್​ ಆಗುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ನೂರಾರು ಅವಕಾಶಗಳು ಬರುತ್ತಿವೆ. ಆದರೆ ಆರಂಭದಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ. ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ (Arya Movie) ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು ಈಗ ಅಲ್ಲು ಅರ್ಜುನ್​ ನೆನಪಿಸಿಕೊಂಡಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಅವರು ನೆನಪಿನ ಪುಟ ತೆರೆದಿದ್ದಾರೆ.

ಅಲ್ಲು ಅರ್ಜುನ್​ ನಟನೆಯ ಮೊದಲ ಸಿನಿಮಾ ‘ಗಂಗೋತ್ರಿ’ 2003ರ ಮಾರ್ಚ್​ 28ರಂದು ಬಿಡುಗಡೆ ಆಗಿತ್ತು. ಆ ಸಿನಿಮಾ ಹಿಟ್​ ಆಯಿತು. ಹಾಗಿದ್ದರೂ ಕೂಡ ಅಲ್ಲು ಅರ್ಜುನ್​ ಅವರಿಗೆ ಉತ್ತಮ ಅವಕಾಶಗಳು ಬಂದಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಈಗ ಹೇಳಿದ್ದಾರೆ. ನೋಡೋಕೆ ತಾವು ಚೆನ್ನಾಗಿರಲಿಲ್ಲ ಎಂದು ಸ್ವತಃ ಅಲ್ಲು ಅರ್ಜುನ್​ ಹೇಳಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅಲ್ಲು ಅರ್ಜುನ್ ಅವರು ಈ ವಿಚಾರವನ್ನು ವಿವರಿಸಿದ್ದಾರೆ. ‘ನಾನು ನಟಿಸಿದ ‘ಗಂಗೋತ್ರಿ’ ಸಿನಿಮಾ ಹಿಟ್​ ಆಯಿತು. ಆದರೆ ನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಅನಿಸಿದ್ದರಿಂದ ಒಳ್ಳೆಯ ಸಿನಿಮಾ ಅವಕಾಶಗಳು ನನಗೆ ಬರಲಿಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ. ಬಳಿಕ ‘ಆರ್ಯ’ ಸಿನಿಮಾದ ಅವಕಾಶ ಸಿಕ್ಕಿದ್ದು ಹೇಗೆ ಎಂದು ಅವರು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಬಿಡುಗಡೆಗೂ ಮುನ್ನ 150 ಕೋಟಿ ರೂಪಾಯಿಗೆ ಹೆಚ್ಚಿತು ಅಲ್ಲು ಅರ್ಜುನ್​ ಸಂಬಳ

‘ಗಂಗೋತ್ರಿ ಸಿನಿಮಾ ಯಶಸ್ವಿ ಆಯಿತು. ಆದರೆ ನಟನಾಗಿ ನಾನು ಗುರುತಿಸಿಕೊಳ್ಳಲು ಸೋತೆ. ನಿತಿನ್ ನಟನೆಯ ‘ದಿಲ್​’ ಸಿನಿಮಾವನ್ನು ನೋಡಲು ಹೋಗಿದ್ದಾಗ ಅಲ್ಲಿ ನನಗೆ ಸುಕುಮಾರ್​ ಪರಿಚಯ ಆಯಿತು. ‘ಆರ್ಯ’ ಚಿತ್ರಕ್ಕಾಗಿ ಅವರು ನನ್ನನ್ನು ಭೇಟಿ ಮಾಡಿದರು. ಅವರು ಹೊಸ ನಿರ್ದೇಶಕನಾಗಿದ್ದರು. ಆದರೆ ಅವರು ಸ್ಕ್ರಿಪ್ಟ್ ಬರೆದ ರೀತಿ ನನಗೆ ತುಂಬ ಇಷ್ಟ ಆಯಿತು’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

ಅಲ್ಲಿಂದ ಶುರುವಾದ ಅಲ್ಲು ಅರ್ಜುನ್​ ಮತ್ತು ಸುಕುಮಾರ್​ ಅವರ ಸ್ನೇಹ ‘ಪುಷ್ಪ 2’ ಸಿನಿಮಾದ ತನಕ ಬಂದಿದೆ. ಈ ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು