19 ವರ್ಷಗಳ ಹಿಂದೆ ಶಿವಣ್ಣ ಸೃಷ್ಟಿಸಿದ್ದ ಟ್ರೆಂಡ್​ ಈಗ ‘ಪುಷ್ಪ 2’ ಚಿತ್ರದಲ್ಲಿ ಮರುಬಳಕೆ

2005ರಲ್ಲಿ ‘ಜೋಗಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರ ಸೃಷ್ಟಿಸಿದ್ದ ಟ್ರೆಂಡ್​ ಸಣ್ಣದಲ್ಲ. ಶಿವರಾಜ್​ಕುಮರ್​ ಅಭಿಮಾನಿಗಳು ಈಗ ಮತ್ತೆ ‘ಜೋಗಿ’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ‘ಪುಷ್ಪ 2’ ಸಿನಿಮಾದ ಹೊಸ ಹಾಡಿನಲ್ಲಿ ಅಲ್ಲು ಅರ್ಜುನ್​ ಅವರ ಕಾಸ್ಟ್ಯೂಮ್​ ನೋಡಿದ ಎಲ್ಲರಿಗೂ ‘ಜೋಗಿ’ ಗೆಟಪ್ ಕಣ್ಮುಂದೆ ಬಂದಿದೆ.

19 ವರ್ಷಗಳ ಹಿಂದೆ ಶಿವಣ್ಣ ಸೃಷ್ಟಿಸಿದ್ದ ಟ್ರೆಂಡ್​ ಈಗ ‘ಪುಷ್ಪ 2’ ಚಿತ್ರದಲ್ಲಿ ಮರುಬಳಕೆ
ಅಲ್ಲು ಅರ್ಜುನ್​, ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: May 02, 2024 | 5:51 PM

ಟೈಟಲ್​ ಸಾಂಗ್​ ಬಿಡುಗಡೆ ಮಾಡುವ ಮೂಲಕ ‘ಪುಷ್ಪ 2’ (Pushpa 2) ಚಿತ್ರತಂಡ ಭರ್ಜರಿ ಪ್ರಚಾರ ಆರಂಭಿಸಿದೆ. ‘ಪುಷ್ಪ ಪುಷ್ಪ..’ ಎಂಬ ಈ ಹಾಡಿಗೆ ದೇವಿ ಶ್ರೀ ಪ್ರಸಾದ್​ ಅವರು ಸಂಗೀತ ನೀಡಿದ್ದಾರೆ. 6 ಭಾಷೆಗಳಲ್ಲಿ ಈ ಸಾಂಗ್​ ಬಿಡುಗಡೆ ಆಗಿದೆ. ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ಮುನ್ನುಗ್ಗುತ್ತಿದೆ. ಟಿ-ಸಿರೀಸ್​ ಮೂಲಕ ‘ಪುಷ್ಪ ಪುಷ್ಪ..’ ಹಾಡು (Pushpa Pushpa Song) ರಿಲೀಸ್​ ಆಗಿದೆ. ಇದರಲ್ಲಿ ಅಲ್ಲು ಅರ್ಜುನ್​ ಅವರನ್ನು ನೋಡಿದ ಅನೇಕರಿಗೆ ‘ಜೋಗಿ’ ಸಿನಿಮಾ ನೆನಪಾಗಿದೆ. ಹೌದು, ಈ ಹಾಡಿನಲ್ಲಿ ಅಲ್ಲು ಅರ್ಜುನ್​ (Allu Arjun) ಧರಿಸಿದ ಬಟ್ಟೆಗೂ, ‘ಜೋಗಿ’ ಚಿತ್ರದಲ್ಲಿ ಶಿವರಾಜ್​ಕುಮಾರ್​ ಧರಿಸಿದ್ದ ಕಾಸ್ಟ್ಯೂಮ್​ಗೂ ಸಾಮ್ಯತೆ ಕಾಣಿಸಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಪುಷ್ಪ ಪುಷ್ಪ..’ ಹಾಡಿನಲ್ಲಿ ಅಲ್ಲು ಅರ್ಜನ್​ ಧರಿಸಿದ ಅಂಗಿಯ ಮೇಲೆ ಹಸ್ತದ ಚಿಹ್ನೆ ಇದೆ. ಕೆಂಪು ಬಣ್ಣದಲ್ಲಿ ಇದನ್ನು ವಿನ್ಯಾಸ ಮಾಡಿಲಾಗಿದೆ. ಈ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅನಾವರಣ ಮಾಡಿದ್ದ ಪೋಸ್ಟರ್​ನಲ್ಲೂ ಅದೇ ಚಿಹ್ನೆಯನ್ನು ಹೈಲೈಟ್​ ಮಾಡಲಾಗಿತ್ತು. ‘ಜೋಗಿ’ ಸಿನಿಮಾದಲ್ಲಿ ಶಿವಣ್ಣ ಧರಿಸಿದ ಶರ್ಟ್​ ಮೇಲೆ ಕೂಡ ಇದೇ ರೀತಿಯ ಹಸ್ತದ ಚಿಹ್ನೆ ಇತ್ತು. ಅದನ್ನು ಈಗ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ.

‘ಪುಷ್ಪ 2’ ಬಿಡುಗಡೆಗೂ ಮುನ್ನ 150 ಕೋಟಿ ರೂಪಾಯಿಗೆ ಹೆಚ್ಚಿತು ಅಲ್ಲು ಅರ್ಜುನ್​ ಸಂಬಳ

‘ಜೋಗಿ’ ಸಿನಿಮಾ 2005ರ ಆಗಸ್ಟ್​ 19ರಂದು ಬಿಡುಗಡೆ ಆಗಿತ್ತು. ಆ ಸಿನಿಮಾ ಸೃಷ್ಟಿಸಿದ್ದ ದಾಖಲೆಗಳು ಹಲವು. ‘ಎಕ್ಸ್​ಕ್ಯೂಸ್​ ಮೀ’ ಹಾಗೂ ‘ಕರಿಯ’ ಚಿತ್ರಗಳ ಯಶಸ್ಸಿನ ಬಳಿಕ ಪ್ರೇಮ್​ ಅವರು ‘ಜೋಗಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಗುರು ಕಿರಣ್​ ಸಂಗೀತ ನಿರ್ದೇಶದನಲ್ಲಿ ಮೂಡಿಬಂದಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಆ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರ ಗೆಟಪ್​, ಕಾಸ್ಟ್ಯೂಮ್​, ಡೈಲಾಗ್​ ಡೆಲಿವರಿ.. ಎಲ್ಲವೂ ಡಿಫರೆಂಟ್​ ಆಗಿತ್ತು. ಆ ಚಿತ್ರ ಬಿಡುಗಡೆಯಾಗಿ 19 ವರ್ಷ ಕಳೆದಿವೆ. ಈಗಲೂ ಅಭಿಮಾನಿಗಳ ಫೇವರಿಟ್​ ಲಿಸ್ಟ್​ನಲ್ಲಿ ಆ ಸಿನಿಮಾ ಇದೆ.

‘ಪುಷ್ಪ ಪುಷ್ಪ..’ ಹಾಡು:

ಅಲ್ಲು ಅರ್ಜುನ್​ ಅವರ ಬೆನ್ನಿನ ಮೇಲೆ ಇರುವ ಈ ಹಸ್ತದ ಗುರುತು ನೋಡಿ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಆಗಸ್ಟ್​ 15ರಂದು ಗ್ರ್ಯಾಂಡ್​ ಆಗಿ ‘ಪುಷ್ಪ 2’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಭಾಷೆಯಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು