‘ಹಿರಣ್ಯ’ ಟೈಟಲ್ ಧನಂಜಯ್ ಬಳಿ ಇತ್ತು..; ನಟ ರಾಜವರ್ಧನ್ ಹಂಚಿಕೊಂಡ್ರು ಕುತೂಹಲಕರ ಮಾಹಿತಿ
Raj Vardhan | Dhananjay: ಬಿಚ್ಚುಗತ್ತಿ ಚಿತ್ರದ ಮೂಲಕ ಪರಿಚಿತರಾಗಿದ್ದ ‘ರಾಜವರ್ಧನ್’ ‘ಹಿರಣ್ಯ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆಯ ಬಗ್ಗೆ ನಟ ಕುತೂಹಲಕರ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ‘ಹಿರಣ್ಯ’ (Hiranya Movie) ಚಿತ್ರ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ರಾಜವರ್ಧನ್ (Raj Vardhan) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಚ್ಚುಗತ್ತಿ ಮೂಲಕ ಐತಿಹಾಸಿಕ ಚಿತ್ರ ಮಾಡಿದ್ದ ಅವರ ಹೊಸ ಚಿತ್ರದ ಟೈಟಲ್ ‘ಹಿರಣ್ಯ’ ಎಂದಿರುವುದು ಕುತೂಹಲ ಮೂಡಿಸಿತ್ತು. ಈ ಕುರಿತು ಮಾತನಾಡಿರುವ ಚಿತ್ರತಂಡ, ಇದು ಐತಿಹಾಸಿಕ ಚಿತ್ರವಲ್ಲ, ಕಮರ್ಷಿಯಲ್ ಚಿತ್ರ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಶೀರ್ಷಿಕೆಯ ಬಗ್ಗೆ ರಾಜವರ್ಧನ್ ಕುತೂಹಲಕ ವಿಚಾರ ಹಂಚಿಕೊಂಡಿದ್ದಾರೆ. ‘ಹಿರಣ್ಯ’ ಶೀರ್ಷಿಕೆಯನ್ನು ನಟ ಧನಂಜಯ್ ಅವರ ಬ್ಯಾನರ್ನಲ್ಲಿ ರಿಜಿಸ್ಟರ್ ಮಾಡಿಸಿದ್ದರಂತೆ. ಈ ಚಿತ್ರಕ್ಕೆ ಹಿರಣ್ಯ ಶೀರ್ಷಿಕೆ ಹೊಂದುತ್ತದೆ ಎಂದಾದ ನಂತರ ಅವರ ಬಳಿ ಹೋಗಿ ಕೇಳಿದರಂತೆ. ಆಗ ಪ್ರೀತಿಯಿಂದ ಧನಂಜಯ್ ಶೀರ್ಷಿಕೆಯ ಹಕ್ಕುಗಳನ್ನು ನೀಡಿದ್ದಾರೆ ಎಂದು ರಾಜವರ್ಧನ್ ನುಡಿದಿದ್ದಾರೆ. ಅಲ್ಲದೇ ಧನಂಜಯ್ಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಶೀರ್ಷಿಕೆಯಿಂದ ಕುತೂಹಲ ಮೂಡಿಸಿರುವ ‘ಹಿರಣ್ಯ’ ಸದ್ಯದಲ್ಲೇ ಸೆಟ್ಟೇರಲಿದೆ. ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದು, ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಇದನ್ನೂ ಓದಿ:
‘ಬಿಚ್ಚುಗತ್ತಿ’ ಮೂಲಕ ಗಮನ ಸೆಳೆದಿದ್ದ ರಾಜ್ವರ್ಧನ್ ಹೊಸ ಚಿತ್ರ ಅನೌನ್ಸ್; ಇಲ್ಲಿದೆ ಹೊಸ ಸಮಾಚಾರ
Published on: Feb 17, 2022 09:55 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

