Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಚ್ಚುಗತ್ತಿ’ ಮೂಲಕ ಗಮನ ಸೆಳೆದಿದ್ದ ರಾಜವರ್ಧನ್ ಹೊಸ ಚಿತ್ರ ಅನೌನ್ಸ್; ಇಲ್ಲಿದೆ ಹೊಸ ಸಮಾಚಾರ

Hiranya | Rajavardhan: ‘ಬಿಚ್ಚುಗತ್ತಿ’ ಮೂಲಕ ಗಮನಸೆಳೆದಿದ್ದ ರಾಜ​ವರ್ಧನ್ ನಟನೆಯ ಹೊಸ ಚಿತ್ರ ಅನೌನ್ಸ್ ಆಗಿದೆ. ಸಂಪೂರ್ಣ ಕಮರ್ಷಿಯಲ್ ಚಿತ್ರ ಇದಾಗಿರಲಿದೆ ಎಂದು ಮಾಹಿತಿ ನೀಡಿದೆ ಚಿತ್ರತಂಡ.

‘ಬಿಚ್ಚುಗತ್ತಿ’ ಮೂಲಕ ಗಮನ ಸೆಳೆದಿದ್ದ ರಾಜವರ್ಧನ್ ಹೊಸ ಚಿತ್ರ ಅನೌನ್ಸ್; ಇಲ್ಲಿದೆ ಹೊಸ ಸಮಾಚಾರ
ನಟ ರಾಜ​ವರ್ಧನ್
Follow us
TV9 Web
| Updated By: shivaprasad.hs

Updated on:Feb 17, 2022 | 10:01 AM

ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜ​ವರ್ಧನ್ (Raj Vardhan) ‘ಬಿಚ್ಚುಗತ್ತಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನಸೆಳೆದಿದ್ದರು. ಇದೀಗ ‘ಪ್ರಣಯಂ’ ಚಿತ್ರದಲ್ಲಿ ನಟಿಸುತ್ತಿರುವ ಅವರ, ಹೊಸ ಚಿತ್ರ ಅನೌನ್ಸ್ ಆಗಿದೆ. ಚಿತ್ರಕ್ಕೆ ‘ಹಿರಣ್ಯ’ (Hiranya Movie) ಎಂದು ಹೆಸರಿಡಲಾಗಿದೆ. ‘ಪ್ರಣಯಂ’ ಚಿತ್ರೀಕರಣದ ಸಮಯದಲ್ಲಿ ಹೊಸ ಚಿತ್ರದ ಆಫರ್ ಬಂದಿತು ಎಂದು ರಾಜವರ್ಧನ್ ಖುಷಿ ಹಂಚಿಕೊಂಡಿದ್ದಾರೆ. ಚಿತ್ರದ ಮುಹೂರ್ತಕ್ಕೆ ಮಾಜಿ ಸಚಿವ ಚೆಲುವ ನಾರಾಯಣಸ್ವಾಮಿ ಆಗಮಿಸಿ ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭಕೋರಿದ್ದಾರೆ. ಈ ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಚಿತ್ರ. ಇದಕ್ಕೂ ಮುನ್ನ ಕಿರುಚಿತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್​ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ನಿರ್ದೇಶಕ ಪ್ರವೀಣ್:

ಮುಹೂರ್ತದ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರವೀಣ್ ಅವ್ಯೂಕ್, ಚಿತ್ರದ ಕುರಿತು ಹೆಚ್ಚಿನ ಗುಟ್ಟುಬಿಟ್ಟುಕೊಡದೇ ಚಿತ್ರವನ್ನು ಪರಿಚಯಿಸಿದರು. ಸಿನಿಮಾ ಕತೆಯ ಬಗ್ಗೆ ಮಾತನಾಡಿದ ನಿರ್ದೇಶಕ‌ ಪ್ರವೀಣ್, ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರದಲ್ಲಿ ಕಂಟೆಂಟ್ ಕಡಿಮೆಯಿರುತ್ತದೆ. ಕಂಟೆಂಟ್ ಇದ್ದರೆ ಮಾಸ್ ಎಲಿಮೆಂಟ್ ಕಡಿಮೆಯಾಗುತ್ತದೆ. ಆದರೆ‌ ಈ ಚಿತ್ರವನ್ನು ಎರಡೂ ಅಂಶಗಳನ್ನು ಸಮನ್ವಯಗೊಳಿಸಿ ಮಾಡಲಾಗುತ್ತದೆ ಎಂದಿದ್ದಾರೆ.

ನಾಯಕ ನಟ ರಾಜ್​ವರ್ಧನ್ ಹೇಳಿದ್ದೇನು?

ನಾಯಕ ನಟ ರಾಜವರ್ಧನ್ ಮಾತನಾಡಿ, ಐದು ದಿನದಲ್ಲಿ ಹೀರೋ ಜೀವನದಲ್ಲಿ ನಡೆಯುವ ಕತೆ ಇದು. ಪಕ್ಕಾ ಕಮರ್ಶಿಯಲ್, ಆಕ್ಷನ್‌ ಚಿತ್ರ ಇದಾಗಿರಲಿದೆ ಎಂದು ಹೇಳಿದ್ದಾರೆ. ಚಿತ್ರದ ಶೀರ್ಷಿಕೆ ಕುರಿತು ಅಚ್ಚರಿಯ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ‘‘ಹಿರಣ್ಯ ಶೀರ್ಷಿಕೆ ಇದ್ದಿದ್ದು ಧನಂಜಯ್ ಬಳಿ. ಈ ಚಿತ್ರಕ್ಕೆ ಶಕ್ತಿಯುತವಾದ ಶೀರ್ಷಿಕೆ ಬೇಕಿತ್ತು. ಬಹಳಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ಕೊನೆಗೆ ಹಿರಣ್ಯ ಶೀರ್ಷಿಕೆಯ ಬಗ್ಗೆ ತಿಳಿಯಿತು. ಅದನ್ನು ಕೇಳಿದಾಗ ಧನಂಜಯ್ ಶೀರ್ಷಿಕೆಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು’’ ಎಂದು ರಾಜವರ್ಧನ್ ನುಡಿದಿದ್ದಾರೆ.

ಬಿಚ್ಚುಗತ್ತಿ ಸಿನಿಮಾಕ್ಕೆ 108 ಕೆಜಿ‌ ಆಗಿದ್ದೆ. ಇದೀಗ ಪ್ರಣಯಂ ಚಿತ್ರಕ್ಕೆ ಲುಕ್ ಬದಲಾಯಿಸಿದ್ದೇನೆ. ಹಿರಣ್ಯ ಚಿತ್ರದ ಕೆಲಸಗಳು ಆರಂಭವಾದ ನಂತರ ಇದಕ್ಕೆ ಗೆಟಪ್ ಬದಲಾಗಲಿದೆ‌ ಎಂದು ರಾಜವರ್ಧನ್ ಹೊಸ ಚಿತ್ರದ ಲುಕ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಜ್ಯೂಡಾ ಸ್ಯಾಂಡಿ ‘ಹಿರಣ್ಯ’ಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಯೋಗೇಶ್ವರನ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಮುಂದಿನ ವಾರ ಚಿತ್ರೀಕರಣಕ್ಕೆ ತೆರಳುವ ಪ್ಲಾನ್‌ನಲ್ಲಿದೆ‌ ಚಿತ್ರತಂಡ. ಶೀಘ್ರದಲ್ಲೇ ಚಿತ್ರದ ಮೊದಲ ಲುಕ್ ರಿವೀಲ್ ಮಾಡುವ ಕುರಿತೂ ಯೋಜನೆಯಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ:

‘ಗಂಗೂಬಾಯಿ ಚಾರಿತ್ರ್ಯ ಹರಣ ಮಾಡಲಾಗಿದೆ, ಅವರು ವೇಶ್ಯೆಯಲ್ಲ’; ಆಲಿಯಾ ಚಿತ್ರದ ವಿರುದ್ಧ ಕಾನೂನು ಮೊರೆ ಹೋದ ಕುಟುಂಬಸ್ಥರು

Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ

Published On - 9:38 am, Thu, 17 February 22

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ