ಚಿತ್ರರಂಗದವರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿದ ನಟ ವಿನೋದ್ ರಾಜ್

| Updated By: ರಾಜೇಶ್ ದುಗ್ಗುಮನೆ

Updated on: Jan 29, 2022 | 7:49 PM

ಅನ್​ಲಾಕ್​ ಪ್ರಕ್ರಿಯೆ ವೇಳೆ ಚಿತ್ರಮಂದಿರಕ್ಕೆ ಕೊನೆಯಲ್ಲಿ ಅವಕಾಶ ನೀಡಲಾಗಿತ್ತು. ಎರಡನೇ ಅಲೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಈಗ ಕೊರೊನಾ ಮೂರನೇ ಅಲೆ ಸಂದರ್ಭದಲ್ಲೂ ಇದೇ ತಾರತಮ್ಯ ಮುಂದುವರಿದಿದೆ. ಇದಕ್ಕೆ ನಟ ವಿನೋದ್​ ಕುಮಾರ್​ ಕೂಡ ಆಕ್ರೋಶ ಹೊರಹಾಕಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಇಂದು (ಜನವರಿ 29) ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ನೈಟ್​ ಕರ್ಫ್ಯೂ ರದ್ದು (Night Curfew Cancel) ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಹಲವು ನಿರ್ಬಂಧಗಳನ್ನು ಸಡಿಲ ಮಾಡಲಾಗಿದೆ. ಆದರೆ, ಚಿತ್ರರಂಗಕ್ಕೆ  ಮಾತ್ರ ತಾರತಮ್ಯ ಮಾಡಲಾಗಿದೆ. ಕೊವಿಡ್ ಕಾಣಿಸಿಕೊಂಡಾಗಿನಿಂದಲೂ ಸಾಕಷ್ಟು ತೊಂದರೆಗೆ ಸಿಲುಕಿರುವ ಚಿತ್ರರಂಗಕ್ಕೆ (Cinema Industry) ಸರ್ಕಾರದ ಹೊಸ ನಿಯಮದಿಂದ ಮತ್ತೆ ನಿರಾಸೆ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಹೀಗಾಗಿ, ದೊಡ್ಡದೊಡ್ಡ ಸಿನಿಮಾಗಳು ರಿಲೀಸ್​ ಆಗೋದು ಮತ್ತೆ ವಿಳಂಬ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ. ಮೊದಲನೇ ಅಲೆ ಕಾಣಿಸಿಕೊಂಡಾಗ ಚಿತ್ರಮಂದರಗಳಿಗೆ ಮೊದಲು ಬೀಗ ಹಾಕಲಾಗಿತ್ತು. ಅನ್​ಲಾಕ್​ ಪ್ರಕ್ರಿಯೆ ವೇಳೆ ಚಿತ್ರಮಂದಿರಕ್ಕೆ ಕೊನೆಯಲ್ಲಿ ಅವಕಾಶ ನೀಡಲಾಗಿತ್ತು. ಎರಡನೇ ಅಲೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಈಗ ಕೊರೊನಾ ಮೂರನೇ ಅಲೆ ಸಂದರ್ಭದಲ್ಲೂ ಇದೇ ತಾರತಮ್ಯ ಮುಂದುವರಿದಿದೆ. ಇದಕ್ಕೆ ನಟ ವಿನೋದ್​ ಕುಮಾರ್​ ಕೂಡ ಆಕ್ರೋಶ ಹೊರಹಾಕಿದ್ದಾರೆ. 

ಇದನ್ನೂ ಓದಿ:  ‘ಫೋರ್​​ ವಾಲ್ಸ್​ ಆ್ಯಂಡ್​ ಟು ನೈಟೀಸ್​’; ಶೀರ್ಷಿಕೆ ನೋಡಿ ಇದು ಅಂಥ ಸಿನಿಮಾ ಅಂದುಕೊಳ್ಳಬೇಡಿ: ಕಥೆ ಬೇರೆಯೇ ಇದೆ

‘ಬಿಗ್​ ಬಾಸ್’ ವೈಷ್ಣವಿ ಗೌಡ ಹೊಸ ಸಿನಿಮಾಗೆ ಭರ್ಜರಿ ಕ್ಲೈಮ್ಯಾಕ್ಸ್​; ಸೆನ್ಸಾರ್​ ಪ್ರಕ್ರಿಯೆ ಮುಗಿಸಿದ ‘ಬಹುಕೃತ ವೇಷಂ’