ಇದೇ ಕಾರಣಕ್ಕೆ ನಟ ಯಶ್ ಜನ್ಮದಿನಾಚರಣೆ ಆಚರಿಸಿಲ್ಲವಂತೆ; ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಯಶ್ ಏನಂದ್ರು ನೋಡಿ

| Updated By: Rakesh Nayak Manchi

Updated on: Jan 08, 2024 | 8:48 PM

ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿದ ನಟ ಯಶ್, ಇಂದು ತಮ್ಮ ಜನ್ಮದಿನವನ್ನು ಆಚರಿಸದಿರಲು ಕಾರಣ ಏನೆಂದು ತಿಳಿಸಿದ್ದಾರೆ. ಅಲ್ಲದೆ, ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸಬೇಕು, ಬ್ಯಾನರ್ ಹಾಕಬೇಕು ಎಂದು ನಾವು ಹೇಳುವುದಿಲ್ಲ. ದೂರದಿಂದಲೇ ಹರಸಿದರೆ ಸಾಕು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಗದಗ, ಜ.8: ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸಬೇಕು, ಬ್ಯಾನರ್ ಹಾಕಬೇಕು ಎಂದು ನಾವು ಹೇಳುವುದಿಲ್ಲ. ಪ್ರತಿವರ್ಷ ಜನ್ಮದಿನ ಬಂದಾಗ ಇಂತಹ ಘಟನೆ ನಡೆಯುತ್ತಿದೆ. ಹೀಗಾಗಿ ನಮಗೆ ನಮ್ಮ ಬರ್ತ್​ಡೆ ಮೇಲೆ ಭಯ ಬಂದಿದೆ. ನನ್ನ ಬಗ್ಗೆ ನಂಗೆ ಅಸಹ್ಯ ಬಂದಿದೆ ಎಂದು ನಟ ಯಶ್ (Yash) ಹೇಳಿದ್ದಾರೆ. ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಅಭಿಮಾನಿಗಳು ಎಲ್ಲಿಂದಲೋ ಕುಳಿತುಕೊಂಡು ನಮಗೆ ಹರಿಸಿದರೆ ಸಾಕು. ಕೊರೊನಾ ಕಾರಣಕ್ಕೆ ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಂದು ನಾನು ನನ್ನ ಜನ್ಮ ದಿನಾಚರಣೆಯನ್ನು ಆಚರಿಸುತ್ತಿಲ್ಲ. ಜನ್ಮದಿನಾಚರಣೆ ಆಚರಿಸಬೇಡಿ ಎಂದರೆ ಅಭಿಮಾನಿಗಲು ಬೇಜಾರಾಗುತ್ತಾರೆ, ಆಚರಿಸಿದರೆ ಏನಾದರು ಒಂದು ನಡೆಯುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 08, 2024 08:47 PM