‘ಇವರು ಅಂಬರೀಷ್​ ತಂಗಿ ರಂಜನಿ..’: ವೇದಿಕೆಯಲ್ಲಿ ಪರಿಚಯ ಮಾಡಿಸಿದ ಸುಮಲತಾ ಅಂಬರೀಷ್​

| Updated By: ಮದನ್​ ಕುಮಾರ್​

Updated on: Apr 30, 2022 | 4:57 PM

ಅಂಬರೀಶ್​ ತಂಗಿ ರಂಜನಿ ಅವರ ಪುತ್ರ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಕುರಿತು ಸುಮಲತಾ ಅಂಬರೀಷ್​ ಮಾತನಾಡಿದ್ದಾರೆ.

‘ರೆಬೆಲ್​ ಸ್ಟಾರ್​’ ಅಂಬರೀಷ್​ ಅವರ ಪುತ್ರ ಅಭಿಷೇಕ್​ ಅಂಬರೀಷ್​ ಅವರು ಈಗಾಗಲೇ ಕನ್ನಡದ ಪ್ರೇಕ್ಷಕರಿಗೆ ಪರಿಚಯ ಆಗಿದ್ದಾರೆ. ಈಗ ಅಂಬರೀಷ್​ ಸಹೋದರಿ ರಂಜನಿ ಅವರ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಹೆಸರು ಕೂಡ ಅಭಿಷೇಕ್​. ಅವರು ನಟಿಸಿರುವ ಸಿನಿಮಾದ ಶೀರ್ಷಿಕೆ ‘ನಿರ್ಮುಕ್ತ’. ಇತ್ತೀಚೆಗೆ ಈ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮ ನಡೆಯಿತು. ಅದಕ್ಕೆ ಅತಿಥಿಗಳಾಗಿ ಸುಮಲತಾ ಅಂಬರೀಷ್​ ಹಾಗೂ ಅಭಿಷೇಕ್​ ಅಂಬರೀಷ್​ ಆಗಮಿಸಿದ್ದರು. ವೇದಿಕೆ ಮೇಲೆ ರಂಜನಿ ಅವರ ಬಗ್ಗೆ ಸುಮಲತಾ ಮಾತನಾಡಿದರು. ‘ಇವ್ರು ಅಂಬರೀಷ್​ ತಂಗಿ. ನನಗೆ ಇವರು ಜಾಸ್ತಿ ಮಾತನಾಡಲು ಬಿಡುತ್ತಿಲ್ಲ. ನಮ್ಮ ಕುಟುಂಬದಲ್ಲಿ ಇವರನ್ನು ಫೀಮೇಲ್​ ವರ್ಷನ್​ ಆಫ್​ ಅಂಬರೀಷ್​ ಅಂತ ಕರೀತೀವಿ’ ಎಂದರು ಸುಮಲತಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

‘ನಮ್ಮ ಕುಟುಂಬದಿಂದ ಮತ್ತೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ’; ಸುಮಲತಾ ಅಂಬರೀಷ್

‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ