ವರ್ಷಕ್ಕೆ ಎರಡೇ ಬಾರಿ ನಡೆಯುವ ಪವಾಡ: ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಶ್ರೀ ಗಂಗಾ ವಿಂಧ್ಯವಾಸಿನಿ ನಾಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶಿಷ್ಟ ಪವಾಡ ನಡೆದಿದೆ. ವರ್ಷಕ್ಕೆ ಎರಡು ಬಾರಿ, ಸೂರ್ಯಕಿರಣಗಳು ಕತ್ತಲ ಗರ್ಭಗುಡಿ ಭೇದಿಸಿ ನೇರವಾಗಿ ಶಿವಲಿಂಗದ ಮೇಲೆ ಬಿದ್ದು ಪ್ರಜ್ವಲಿಸುತ್ತವೆ. ಈ ಪ್ರಾಚೀನ ಶಿಲ್ಪಕಲೆಯ ಅದ್ಭುತ ಮೂರು ದಿನಗಳ ಕಾಲ ಜರುಗಲಿದ್ದು, ಶಿವಲಿಂಗವು ಚಿನ್ನದ ಬೆಳಕಿನಲ್ಲಿ ಕಂಗೊಳಿಸುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಹರಿದುಬರುತ್ತಿದ್ದಾರೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಪಟ್ಟಣದಲ್ಲಿರುವ ಪ್ರಸಿದ್ಧ ಸಾವಿರ ಕಂಬಗಳ ‘ಶ್ರೀ ಗಂಗಾ ವಿಂಧ್ಯವಾಸಿನಿ ನಾಗೇಶ್ವರ ಸ್ವಾಮಿ’ ದೇವಾಲಯದಲ್ಲಿ ಅಪರೂಪದ ಪ್ರಾಚೀನ ಶಿಲ್ಪಕಲೆಯ ಅದ್ಭುತವೊಂದು ಜರುಗಿದೆ. ಕತ್ತಲೆಯ ಗರ್ಭಗುಡಿಯನ್ನು ಭೇದಿಸಿ ಬಂದ ಪ್ರಕಾಶಮಾನವಾದ ಸೂರ್ಯಕಿರಣಗಳು ನೇರವಾಗಿ ನಾಗೇಶ್ವರ ಸ್ವಾಮಿಯ ಶಿವಲಿಂಗದ ಮೇಲೆ ಬಿದ್ದು ದಿವ್ಯವಾಗಿ ಶೋಭಿಸಿವೆ. ವರ್ಷಕ್ಕೆ ಎರಡು ಬಾರಿ ಮಾತ್ರ (ಉತ್ತರಾಯಣದಲ್ಲಿ ಸಿಂಗಾರಕೊಂಡ ತಿರುನಾಳಿನ ನಂತರ ಮತ್ತು ದಕ್ಷಿಣಾಯಣದಲ್ಲಿ ವಿನಾಯಕ ಚತುರ್ಥಿಯ ಬಳಿಕ) ಸಂಭವಿಸುವ ಈ ಪವಾಡವು ಸತತ ಮೂರು ದಿನಗಳ ಕಾಲ ಜರುಗಲಿದ್ದು, ಅಭಿಷೇಕದ ವೇಳೆ ಶಿವಲಿಂಗವು ಚಿನ್ನದ ಬೆಳಕಿನಲ್ಲಿ ಕಂಗೊಳಿಸಿದ ಈ ವೈಭವವನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಭಕ್ತರು ದೇವಾಲಯಕ್ಕೆ ಹರಿದುಬರುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 27, 2026 12:33 PM
Follow Us
Latest Videos
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ

