ಕೆಎಎಸ್ ಗೆಜಿಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಹೆಚ್ಚುವರಿ ಕ್ರಮ

ಕೆಎಎಸ್ ಗೆಜಿಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಹೆಚ್ಚುವರಿ ಕ್ರಮ
|

Updated on: Aug 27, 2024 | 11:43 AM

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಲಬುರಗಿ ಕುಖ್ಯಾತಿ ಪಡೆದಿದೆ. ಪಿಎಸ್ಐ ನೇಮಕಾತಿ ಹಗರಣದ ಮೂಲ ಕಲಬುರಗಿಯೇ ಅಗಿತ್ತು ಮತ್ತು ಹಗರಣದ ತನಿಖೆ ಈಗಲೂ ಜಾರಿಯಲ್ಲಿದೆ. ಕೆಎಎಸ್ ಗೆಜಿಟೆಡ್ ಪ್ರೊಬೇಷನರ್ಸ್ ಪರೀಕ್ಷೆಯಲ್ಲಿ ಅಕ್ರಮವೇನಾದರೂ ನಡೆದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯ ಬದುಕನ್ನು ವಿಪಕ್ಷ ನಾಯಕರು ನರಕ ಮಾಡಲಿದ್ದಾರೆ.

ಕಲಬುರಗಿ: ಕೆಲ ಆಕಾಂಕ್ಷಿಗಳ ಪ್ರತಿಭಟನೆ ಹೊರತಾಗಿಯೂ ರಾಜ್ಯ ಸರ್ಕಾರವು ಕೆಎಎಸ್ ಗೆಜಿಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಗಳನ್ನು ಇಂದು ರಾಜ್ಯದ ಹಲವಾರು ಕೇಂದ್ರಗಳಲ್ಲಿ ನಡೆಸುತ್ತಿದೆ. ಕೆಎಎಸ್ ಪರೀಕ್ಷೆಗಳಲ್ಲಿ ಒಂದಿಲ್ಲ ಒಂದು ಬಗೆಯ ಅಕ್ರಮ ಅವ್ಯವಹಾರ ನಡೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೆಚ್ಚವರಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಕಲಬುರಗಿಯ ಪರೀಕ್ಷಾ ಕೇಂದ್ರವೊಂದರ ಬಳಿ ಕೆಈಎ ಅಧಿಕಾರಿಗಳು ಮತ್ತು ಪೊಲೀಸರು ಪರೀಕ್ಷಾರ್ಥಿ ಯುವತಿಯರ ಮೂಗುತಿ ಮತ್ತು ಕಿವಿಯೋಲೆಗಳನ್ನು ಸಹ ಬಿಚ್ಚುತ್ತಿರುವುದು ಅಥವಾ ಬಿಚ್ಚಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮೂಗುತಿ ಮತ್ತು ಈಯರ್ ರಿಂಗ್ ಗಳನ್ನು ಬಿಚ್ಚುವ ಹೊಸ ವಿಧಾನವನ್ನು ಅಧಿಕಾರಿಗಳು ಅವಿಷ್ಕಾರ ಮಾಡಿದಂತಿದೆ ಮಾರಾಯ್ರೇ. ಕತ್ತರಿಯನ್ನು ಉಪಯೋಗಿಸಿ ಅವುಗಳನ್ನು ಬಿಚ್ಚುತ್ತಾರೆಯೇ? ಪ್ರಾಯಶಃ ಕನ್ನಡಿಗರು ಈ ವಿಧಾನವನ್ನು ಮೊದಲ ಬಾರಿಗೆ ನೋಡುತ್ತಿರಬಹುದು. ಏನಾದರರೂ ಇರಲಿ, ಹೇಗಾದರೂ ಇರಲಿ ಪರೀಕ್ಷೆಗಳು ಅಕ್ರಮಗಳಿಲ್ಲದೆ ನಡೆದರೆ ಸಾಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  KPSC ಭ್ರಷ್ಟಾಚಾರದ ಕೂಪ: ಆ. 27ಕ್ಕೆ KAS ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿದಕ್ಕೆ ಅಭ್ಯರ್ಥಿಗಳ ಆಕ್ರೋಶ

Follow us