ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲೇ ದಾಖಲೆ ಬರೆದ ಅಫ್ಘಾನ್ ವೇಗಿ
Zimbabwe vs Afghanistan: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 127 ರನ್ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಝಿಂಬಾಬ್ವೆ ತಂಡ 359 ರನ್ಗಳನ್ನು ಕಲೆಹಾಕಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಅಫ್ಘಾನಿಸ್ತಾನ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 34 ರನ್ ಕಲೆಹಾಕಿದೆ.
ಅಫ್ಘಾನಿಸ್ತಾನ್ ತಂಡದ ಯುವ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಚೊಚ್ಚಲ ಪಂದ್ಯದಲ್ಲೇ ಕಮಾಲ್ ಮಾಡಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿರುವ ಝಿಯಾವುರ್ ರೆಹಮಾನ್ ಮೊದಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿದ್ದಾರೆ. ಅದು ಕೂಡ ಮೊದಲ ಇನಿಂಗ್ಸ್ನಲ್ಲಿ ಎಂಬುದು ವಿಶೇಷ.
ಈ ಪಂದ್ಯದಲ್ಲಿ 32 ಓವರ್ಗಳನ್ನು ಎಸೆದ ಝಿಯಾವುರ್ ರೆಹಮಾನ್ 97 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ್ ಪರ ಚೊಚ್ಚಲ ಟೆಸ್ಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೆಯೇ ಪಾದಾರ್ಪಣೆ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಏಷ್ಯಾದ 2ನೇ ಬೌಲರ್ ಎಂಬ ದಾಖಲೆಯನ್ನು ಸಹ ಝಿಯಾವುರ್ ರೆಹಮಾನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 1988 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಕಬಳಿಸಿದ್ದ ಭಾರತದ ನರೇಂದ್ರ ಹೀರ್ವಾನಿ ಮೊದಲ ಸ್ಥಾನದಲ್ಲಿದ್ದಾರೆ.
ಇದೀಗ ಮೊದಲ ಮ್ಯಾಚ್ನಲ್ಲೇ ಏಳು ವಿಕೆಟ್ ಉರುಳಿಸಿ ಝಿಯಾವುರ್ ರೆಹಮಾನ್ ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 127 ರನ್ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಝಿಂಬಾಬ್ವೆ ತಂಡ 359 ರನ್ಗಳನ್ನು ಕಲೆಹಾಕಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಅಫ್ಘಾನಿಸ್ತಾನ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 34 ರನ್ ಕಲೆಹಾಕಿದೆ.
ನ್ಯೂ ಇಯರ್: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್
ಬೆಳಗಾವಿಯಲ್ಲಿ ನ್ಯೂಇಯರ್ ಕಿಕ್; ಭರ್ಜರಿ ಸ್ಟೆಪ್ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ

